ವಾರಾಂತ್ಯ ಸಂಗೀತ ಉತ್ಸವ

7

ವಾರಾಂತ್ಯ ಸಂಗೀತ ಉತ್ಸವ

Published:
Updated:

ಬಹು ನಿರೀಕ್ಷೆಯ ಸಂಗೀತ ಉತ್ಸವ `ಬಕಾರ್ಡಿ ಎನ್‌ಎಚ್7 ವೀಕೆಂಡರ್' (ವಾರಾಂತ್ಯದ ಸಂಗೀತೋತ್ಸವ) ಮೊಟ್ಟಮೊದಲ ಬಾರಿಗೆ ಬೆಂಗಳೂರಿಗೆ ಬಂದಿದೆ. ಶನಿವಾರ (ಡಿ.15) ಎಂಬೆಸಿ ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.ಬಕಾರ್ಡಿ ಬ್ಲಾಕ್ ರಾಕ್ ಅರೆನಾ ವಿಥ್ ರಾಕ್ ಅಂಡ್ ಮೆಟಲ್, ಪೆಪ್ಸಿಡಬ್ ಸ್ಟೇಷನ್ ವಿಥ್ ಡಬ್‌ಸ್ಟೆಪ್, ಡ್ರಮ್ ಎನ್ ಬಾಸ್ ಅಂಡ್ ರೆಗ್ಗೇ ಮತ್ತು ದಿ ಅದರ್ ಸ್ಟೇಜ್‌ನೊಂದಿಗೆ ಅತ್ಯಂತ ಉತ್ಸಾಹಿ ಗಾಯಕರು ಮತ್ತು ಗೀತ ರಚನೆಕಾರರು ಪ್ರತಿಭೆ ಪ್ರದರ್ಶಿಸಲಿದ್ದಾರೆ.ಹೊಸ ಬ್ಯಾಂಡ್‌ಗಳೂ ಇಲ್ಲಿ ಪ್ರದರ್ಶನ ನೀಡಲಿವೆ. ರಘು ದೀಕ್ಷಿತ್ `ಬಕಾರ್ಡಿ ಎನ್‌ಎಚ್7 ವೀಕೆಂಡರ್ 2012'ರ ದಿ ವಾರಿಸ್ಟ್ಸ್ ಸ್ಟೇಜ್‌ನಲ್ಲಿ ಭಾಗವಹಿಸಲಿದ್ದಾರೆ. ಅವರು ಬಕಾರ್ಡಿ ಎನ್‌ಎಚ್7 ವಾರಾಂತ್ಯ ಕಛೇರಿಯ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು. ಟಿಕೆಟ್‌ಗಳಿಗೆ ಈ ವೆಬ್‌ಸೈಟ್ ನೋಡಿ:

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry