ವಾರಿಯರ್ಸ್‌ಗೆ ಟಸ್ಕರ್ಸ್ ಸವಾಲು

7

ವಾರಿಯರ್ಸ್‌ಗೆ ಟಸ್ಕರ್ಸ್ ಸವಾಲು

Published:
Updated:
ವಾರಿಯರ್ಸ್‌ಗೆ ಟಸ್ಕರ್ಸ್ ಸವಾಲು

ಮುಂಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ತಮ್ಮ  ಪದಾರ್ಪಣೆ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿರುವ ಕೊಚ್ಚಿ ಟಸ್ಕರ್ಸ್ ಕೇರಳ ತಂಡದವರು ಈಗ ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಈ ಪಂದ್ಯದಲ್ಲಿ ಕೊಚ್ಚಿ ತಂಡದವರು ಯುವರಾಜ್ ಸಿಂಗ್ ಸಾರಥ್ಯದ ಪುಣೆ ವಾರಿಯರ್ಸ್‌ಗೆ ಸವಾಲು ನೀಡಲಿದ್ದಾರೆ.

 

ತಮ್ಮ ಮೊದಲ ಪಂದ್ಯದಲ್ಲಿ ಕೇರಳ ತಂಡದವರು161 ರನ್ ಗಳಿಸಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲು ಕಂಡಿದ್ದರು. ಅದಕ್ಕೆ ಕಾರಣ ಬೌಲಿಂಗ್ ವೈಫಲ್ಯ. ಮುತ್ತಯ್ಯ ಮುರಳೀಧರನ್, ಎಸ್.ಶ್ರೀಶಾಂತ್, ಆರ್.ಪಿ.ಸಿಂಗ್ ಹಾಗೂ ಆರ್.ವಿನಯ್ ಕುಮಾರ್ ಅವರಂತಹ ಅನುಭವಿ ಬೌಲರ್‌ಗಳನ್ನು ಹೊಂದಿದ್ದರೂ ಈ ತಂಡದವರು ಎಡವಿದ್ದರು.

ಆದರೆ ತಮ್ಮ ಚೊಚ್ಚಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಗೆದ್ದಿರುವ ಪುಣೆ ವಾರಿಯರ್ಸ್ ವಿಶ್ವಾಸದಿಂದ ಕೂಡಿದೆ.  ಈ ತಂಡದ ಬಲ ಬ್ಯಾಟಿಂಗ್. ಜೆಸ್ಸಿ ರೈಡರ್, ಯುವರಾಜ್ ಹಾಗೂ ರಾಬಿನ್ ಉತ್ತಪ್ಪ ಈ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು. ಹಾಗಾಗಿ ಕೊಚ್ಚಿ ತಂಡದ ಬೌಲರ್‌ಗಳ ಮುಂದೆ ದೊಡ್ಡ ಸವಾಲು ಇದೆ.

ಗಾಯಗೊಂಡಿರುವ ಆಶೀಶ್ ನೆಹ್ರಾ ಬದಲಿಗೆ ಸ್ಥಾನ ಪಡೆದಿರುವ 22ರ ಹರೆಯದ ಶ್ರೀಕಾಂತ್ ವಾಘ್ ಪುಣೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಆದರೆ ವಿಶ್ವಕಪ್‌ನಲ್ಲಿ 15 ವಿಕೆಟ್ ಪಡೆದಿದ್ದ ಯುವಿ ಮೊದಲ ಪಂದ್ಯದಲ್ಲಿ ಬೌಲ್ ಮಾಡಿರಲಿಲ್ಲ. ಬುಧವಾರದ ಪಂದ್ಯದಲ್ಲಿ ಅವರು ತಮ್ಮ ಬೌಲಿಂಗ್ ಜಾದೂ ಪ್ರದರ್ಶಿಸುವ ನಿರೀಕ್ಷೆ ಇದೆ.

ಕೊಚ್ಚಿ ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ವಿಫಲವಾಗಿರುವ ಸ್ಥಳೀಯ ಆಟಗಾರ ರೈಫಿ ಗೊಮೆಜ್ ಬದಲಿಗೆ ಆಲ್‌ರೌಂಡರ್ ಬಿ.ಅಖಿಲ್ ಕಣಕ್ಕಿಳಿಯುವ ಸಂಭವವಿದೆ. ಈ ತಂಡದ ಬ್ಯಾಟಿಂಗ್ ಕ್ರಮಾಂಕ ಕೂಡ ಉತ್ತಮವಾಗಿದೆ. ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರೂ ಅಚ್ಚರಿ ಇಲ್ಲ.

ತಂಡಗಳು

ಯುವರಾಜ್ ಸಿಂಗ್ (ನಾಯಕ), ಗ್ರೇಮ್ ಸ್ಮಿತ್, ಜೆಸ್ಸಿ ರೈಡರ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಕಾಲಮ್ ಫರ್ಗ್ಯುಸನ್, ಮಿಷೆಲ್ ಮಾರ್ಷ್, ನಥಾನ್ ಮೆಕ್ಲಮ್, ಟಿಮ್ ಪೈನ್, ವೇಯ್ನಿ ಪಾರ್ನೆಲ್, ಜೆರೊಮಿ ಟೇಲರ್, ಮುರಳಿ ಕಾರ್ತಿಕ್, ಅಭಿಷೇಕ್ ಜುನ್‌ಜುನ್‌ವಾಲ, ಭುವನೇಶ್ವರ್ ಕುಮಾರ್, ಧೀರಜ್ ಜಾದವ್, ಏಕಲವ್ಯ ದ್ವಿವೇದಿ, ಗಣೇಶ್ ಗಾಯಕ್‌ವಾಡ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಹರ್ಷದ್ ಖಾಡಿವಾಲೆ, ಕಮ್ರಾನ್ ಖಾನ್, ಮಿಥುನ್ ಮನ್ಹಾಸ್, ಮೋನಿಶ್ ಮಿಶ್ರಾ, ರಾಹುಲ್ ಶರ್ಮಾ, ಸಚಿನ್ ರಾಣಾ, ಶ್ರೀಕಾಂತ್ ವಾಗ್, ಶ್ರೀಕಾಂತ್ ಎಂ ಹಾಗೂ ಇಮ್ತಿಯಾಜ್ ಅಹ್ಮದ್.

ಕೊಚ್ಚಿ ಟಸ್ಕರ್ಸ್ ಕೇರಳ

ಮಾಹೇಲ ಜಯವರ್ಧನೆ (ನಾಯಕ), ವಿ.ವಿ.ಎಸ್ ಲಕ್ಷ್ಮಣ್, ಬ್ರಾಡ್ ಹಾಡ್ಜ್, ಒವೇಸ್ ಶಾ, ಮೈಕಲ್ ಕ್ಲಿಂಗರ್, ಬ್ರೆಂಡನ್ ಮೆಕ್ಲಮ್, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ, ತಿಸಾರ ಪೆರೇರಾ, ಜಾನ್ ಹೇಸ್ಟಿಂಗ್ಸ್, ಸ್ಟೀವನ್ ಸ್ಮಿತ್, ಎಸ್. ಶ್ರೀಶಾಂತ್, ಆರ್.ಪಿ ಸಿಂಗ್, ಮುತ್ತಯ್ಯ ಮುರಳೀಧರನ್, ರಮೇಶ್ ಪೊವಾರ್, ಆರ್. ವಿನಯ್ ಕುಮಾರ್, ಸ್ಟೀವ್ ಒಕೀಫ್, ದೀಪಕ್ ಚೌಗುಲೆ, ಬಿ. ಅಖಿಲ್, ರೈಫಿ ಗೊಮೆಜ್, ಕೇದಾರ್ ಜಾದವ್, ಚಂದನ್ ಮದನ್, ತನ್ಮಯ್ ಶ್ರೀವಾತ್ಸವ, ಯಶ್‌ಪಾಲ್ ಸಿಂಗ್, ಸುಶಾಂತ್ ಮರಾಠೆ ಹಾಗೂಜ್ಞಾನೇಶ್ವರ ರಾವ್.

 

ಪಂದ್ಯದ ಆರಂಭ: ಸಂಜೆ 8.00ಕ್ಕೆ ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry