ಶನಿವಾರ, ನವೆಂಬರ್ 16, 2019
21 °C

ವಾರಿಯರ್ಸ್‌ಗೆ ಸವಾಲಾಗುವುದೇ ಕಿಂಗ್ಸ್ ಇಲೆವೆನ್?

Published:
Updated:

ಮೊಹಾಲಿ (ಪಿಟಿಐ): ಸಮ ಗೆಲುವು ಹಾಗೂ ಸಮ ಅಂಕಗಳನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಪುಣೆ ವಾರಿಯರ್ಸ್ ತಂಡಗಳು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಆರನೇ ಆವೃತ್ತಿಯಲ್ಲಿ ಭಾನುವಾರ ಮುಖಾಮುಖಿಯಾಗಲಿವೆ.ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ನಾಲ್ಕು ಅಂಕಗಳನ್ನು ಹೊಂದಿವೆ. ಆದರೆ, ಎರಡೂ ತಂಡಗಳ ಆಟಗಾರರಿಗೆ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ. ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ಕಿಂಗ್ಸ್ ಇಲೆವೆನ್ ಹಾಗೂ ಏಂಜಲೊ ಮ್ಯಾಥ್ಯುಸ್ ಸಾರಥ್ಯದ ವಾರಿಯರ್ಸ್ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿವೆ. ಉಭಯ ತಂಡಗಳು ಹಿಂದಿನ ಪಂದ್ಯಗಳಲ್ಲಿ ಕಲೆ ಹಾಕಿದ ಅಲ್ಪ ಮೊತ್ತವೇ ಇದಕ್ಕೆ ಸಾಕ್ಷಿ.ಕಿಂಗ್ಸ್ ಇಲೆವೆನ್ ಪಂಜಾಬ್-ಪುಣೆ ವಾರಿಯರ್ಸ್

ಆರಂಭ: ರಾತ್ರಿ 8ಕ್ಕೆ, ಮೊಹಾಲಿ

ಪ್ರತಿಕ್ರಿಯಿಸಿ (+)