ಗುರುವಾರ , ನವೆಂಬರ್ 14, 2019
19 °C

ವಾರಿಯರ್ಸ್ ತಂಡಕ್ಕೆ ಜಯ

Published:
Updated:
ವಾರಿಯರ್ಸ್ ತಂಡಕ್ಕೆ ಜಯ

ಚೆನ್ನೈ (ಪಿಟಿಐ): ಆ್ಯರನ್ ಫಿಂಚ್, ಸ್ಟೀವನ್ ಸ್ಮಿತ್ ಹಾಗೂ ಭುವನೇಶ್ವರ್ ಕುಮಾರ್ ಅವರ ಅಮೋಘ ಪ್ರದರ್ಶನದ ನೆರವಿನಿಂದ ಪುಣೆ ವಾರಿಯರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಎದುರು 24 ರನ್‌ಗಳ ಗೆಲುವು ಸಾಧಿಸಿತು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 159 ರನ್ ಪೇರಿಸಿತು. ಈ ಗುರಿಗೆ ಉತ್ತರವಾಗಿ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 135 ರನ್ ಗಳಿಸಿತು. ಭುವನೇಶ್ವರ್ 4 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಕಬಳಿಸಿದರು.ಉತ್ತಮ ಆರಂಭ: ಟಾಸ್ ಗೆದ್ದ ವಾರಿಯರ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ಫಿಂಚ್ (67, 45 ಎಸೆತ, 10 ಬೌಂ, 2 ಸಿಕ್ಸರ್) ಮತ್ತು ರಾಬಿನ್ ಉತ್ತಪ್ಪ (26, 33 ಎಸೆತ) ಮೊದಲ ವಿಕೆಟ್‌ಗೆ 12.3 ಓವರ್‌ಗಳಲ್ಲಿ 96 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.ಟೂರ್ನಿಯಲ್ಲಿ ಇದೇ ಮೊದಲ ಬಾರಿ ಆಡಲು ಅವಕಾಶ ಪಡೆದ ಸ್ಟೀವನ್ ಸ್ಮಿತ್ (39, 16 ಎಸೆತ, 3 ಬೌಂ, 3 ಸಿಕ್ಸರ್) ಕೊನೆಯಲ್ಲಿ ಸ್ಫೋಟಕ ಆಟ ತೋರಿದ ಕಾರಣ ತಂಡದ ಮೊತ್ತ 150ರ ಗಡಿ ದಾಟಿತು.

ಡ್ವೇನ್ ಬ್ರಾವೊ ಎಸೆದ ಕೊನೆಯ ಓವರ್‌ನಲ್ಲಿ ಸ್ಮಿತ್ `ರಿವರ್ಸ್' ಹೊಡೆತದ ಮೂಲಕ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ ರೀತಿ ಚೇತೋಹಾರಿಯಾಗಿತ್ತು.

ಪ್ರತಿಕ್ರಿಯಿಸಿ (+)