`ವಾರ್ಷಿಕಸಾವಿರ ಎಕರೆ ನೀರಾವರಿ'

7

`ವಾರ್ಷಿಕಸಾವಿರ ಎಕರೆ ನೀರಾವರಿ'

Published:
Updated:

ಗುಲ್ಬರ್ಗ: ಮೂರು ಬ್ಯಾರೇಜ್ ಕಮ್ ಬ್ರಿಡ್ಜ್ ಕಾಮಗಾರಿಗಳನ್ನು  ವರ್ಷದಲ್ಲಿ ಪೂರೈಸಿ ಸುಮಾರು   ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ     ಹೇಳಿದರು.ಆಳಂದ ತಾಲ್ಲೂಕಿನ ಅಂಬಲಗಾ, ಲಾಡಮುಗಳಿ ಹಾಗೂ ಲೇಂಗಟಿಯ ಬ್ಯಾರೇಜ್ ಕಮ್ ಬ್ರಿಡ್ಜ್‌ಗಳ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಗಂಡೋರಿ ನಾಲಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ಬ್ಯಾರೇಜ್ ಕಮ್ ಬ್ರಿಡ್ಜ್‌ಗಳ ನಿರ್ಮಾಣದಿಂದ ಫಲವತ್ತತೆ, ನೀರಿನ ಮಟ್ಟ, ದನಕರುಗಳಿಗೆ ಕುಡಿಯುವ ನೀರು, ಮೇವಿನ ಸೌಲಭ್ಯ ದೊರಕಲಿದೆ ಎಂದರು.ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರೈತರಿಗೆ ಶೇ3ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಅಲ್ಲದೇ ರೈತರ 25 ಸಾವಿರ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡಲಾಗಿದೆ. ಇದನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸುವ ಉದ್ದೇಶವಿದೆ. ಅಂಬಲಗಾ, ಮುಗುಳಿ ಗ್ರಾಮಗಳನ್ನು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದರು.ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ದೆಹಲಿಯಲ್ಲಿ ನಡೆದ ರಾಜ್ಯ ಪಶು ಸಂಗೋಪನೆ ಸಚಿವರ ಸಭೆಯಲ್ಲಿ       ಭೇಟಿಯಾಗಿ ಕೃಷಿ ಸೌಲಭ್ಯ ಹೆಚ್ಚಳಕ್ಕೆ ಆಗ್ರಹಿಸಿದ್ದಾಗಿ ಹೇಳಿದ ಅವರು, ಜನವರಿ ಎರಡನೇ ವಾರದಲ್ಲಿ                   ಮತ್ತೊಮ್ಮೆ  ಭೇಟಿ ಮಾಡಿ ಪಶು ಸಂಗೋಪನೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೆ ತರುವ ಕುರಿತು ಚರ್ಚಿಸುವುದಾಗಿ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ್ ಹಣಮಂತ್ ಬೀಳಗಿ, ಸದಸ್ಯ ಕಲ್ಲಪ್ಪ ಚೀಲಿ, ಗ್ರಾಪಂ ಸದಸ್ಯ ಸಿದ್ರಾಮಪ್ಪ ಗುದಗೆ, ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ಸುಗೂರ್, ಮುಖಂಡರಾದ ಕಲ್ಯಾಣರಾವ್ ಪಾಟೀಲ್ ಮಡಕಿ, ಬಾಬುರಾವ್ ಹಿರೇಮಸೆಟ್ಟಿ, ಬಸವರಾಜ್ ಪಾಟೀಲ್ ಬೆಳಮಗಿ, ರೇವಪ್ಪ ಸರಡಗಿ, ಬಾಬುರಾವ್, ಎಪಿಎಂಸಿ ಸದಸ್ಯ ಶಿವರಾಯಗೌಡ ಪಾಟೀಲ್ ಇದ್ದರು.ಗ್ರಾಪಂ ಅಧ್ಯಕ್ಷ ಶಂಭುಲಿಂಗ್ ರಾಜಪ್ಪಾ ಖಂಡಾಳಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಯಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮೂರು ಕಾಮಗಾರಿಗಳನ್ನು ಒಟ್ಟು 558.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.ಸುಮಾರು 926 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಮತ್ತು ಒಟ್ಟು 926 ಎಕರೆಗೆ ಅಂಬಲಗಾ, ಲಾಡಮುಗಳು, ಲೇಂಗಟಿ ಮುಂತಾದ ಗ್ರಾಮಗಳ ಜಮೀನು ನೀರಾವರಿ ಸೌಲಭ್ಯ ಪಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಅಭಿಯಂತರ ಭಗವಂತಿ, ಅಜಗೊಂಡ್, ಆನಂದ್, ಕಿರಿಯ ಅಭಿಯಂತರರಾದ ಅನಿಲಕುಮಾರ್, ಜಲೀಲಖಾನ್, ಮದುಸೂಧನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry