ವಾರ್ಷಿಕ ಕ್ರೀಡಾಕೂಟ ಸಮಾರೋಪ

7

ವಾರ್ಷಿಕ ಕ್ರೀಡಾಕೂಟ ಸಮಾರೋಪ

Published:
Updated:
ವಾರ್ಷಿಕ ಕ್ರೀಡಾಕೂಟ ಸಮಾರೋಪ

ಬೆಂಗಳೂರು: `ಗೃಹರಕ್ಷಕ ಹಾಗೂ ಪೌರರಕ್ಷಕ ದಳದ ಸಿಬ್ಬಂದಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ' ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎ.ಆರ್.ಇನ್ಫಂಟ್ ಅಭಿಪ್ರಾಯಪಟ್ಟರು.ನಗರದಲ್ಲಿ ಈಚೆಗೆ ಆಯೋಜಿಸಲಾಗಿದ್ದ ರಾಜ್ಯ ಗೃಹರಕ್ಷಕ ದಳ, ಪೌರರಕ್ಷಕ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹಲವು ಕಠಿಣ ಸಂದರ್ಭಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗೃಹರಕ್ಷಕ ಮತ್ತು ಪೌರರಕ್ಷಕ ಸಿಬ್ಬಂದಿ ಅವರಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಷವಿಡೀ ಬಿಡುವಿಲ್ಲದೆ ದುಡಿಯುವ ಸಿಬ್ಬಂದಿಗೆ ಸವಲತ್ತುಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ವೇತನ, ಸಮವಸ್ತ್ರ ಸೇರಿದಂತೆ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಇಲಾಖೆಗಳ ಸಿಬ್ಬಂದಿಗೆ ಶಿಸ್ತು ಹಾಗೂ ದೇಹದಾರ್ಢ್ಯತೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿದಿನ ವ್ಯಾಯಾಮ, ದೈಹಿಕ ಕಸರತ್ತುಗಳನ್ನು ನಡೆಸುವುದು ಅಗತ್ಯ. ಕಠಿಣ ಸನ್ನಿವೇಶಗಳನ್ನು ಎದುರಿಸುವ ಸಿಬ್ಬಂದಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಕ್ರೀಡಾಪಟುಗಳು ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇದೇ ಉತ್ಸಾಹವನ್ನು ಕರ್ತವ್ಯದಲ್ಲೂ ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಕಾರ್ಯಕ್ರಮದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ಔರಾದ್‌ಕರ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಓಂಪ್ರಕಾಶ್, ಐಜಿಪಿ ಎನ್.ಶಿವಕುಮಾರ್, ನಿರ್ದೇಶಕ ಬಿ.ಜಿ. ಚೆಂಗಪ್ಪಭಾಗವಹಿಸಿದ್ದರು. ಕವಾಯತಿನ ನೇತೃತ್ವವನ್ನು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಟಿ.ಎನ್.ಶಿವಶಂಕರ್ ವಹಿಸಿದ್ದರು.ಮೂರು ದಿನಗಳ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಗಳೂರು ಮತ್ತು ಚಿತ್ರದುರ್ಗ ಪಶ್ಚಿಮ ವಿಭಾಗದ ಗೃಹರಕ್ಷಕ ಇಲಾಖೆ ಪ್ರಶಸ್ತಿ ಗಳಿಸಿತು. ಉಳಿದಂತೆ ಹಗ್ಗ ಜಗ್ಗಾಟ ಪ್ರೇಕ್ಷಕರ ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry