ವಾರ್‌ಲೀಕ್ಸ್, ರಾಯಲ್ ವೆಡ್ಡಿಂಗ್

7

ವಾರ್‌ಲೀಕ್ಸ್, ರಾಯಲ್ ವೆಡ್ಡಿಂಗ್

Published:
Updated:
ವಾರ್‌ಲೀಕ್ಸ್, ರಾಯಲ್ ವೆಡ್ಡಿಂಗ್

ಬ್ರಿಟಿಷ್ ರಾಜಮನೆತನದಲ್ಲಿ ಬಹುಕಾಲದ ನಂತರ ವಿವಾಹ ಮಹೋತ್ಸವವೊಂದು ನಡೆಯಲಿದೆ. ರಾಜಕುಮಾರ್ ವಿಲಿಯಮ್ಸ್ ಮತ್ತು ಆತನ ಬಹುಕಾಲದ ಗೆಳತಿ ಕ್ಯಾಥೆರಿನ್ ಮಿಡಲ್‌ಟನ್ ಏ. 29ರಂದು ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ.ಬ್ರಿಟನ್‌ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಸುದ್ದಿಯಲ್ಲಿರುವ ಈ ವಿವಾಹ ಮತ್ತು ರಾಜ ಮನೆತನದ ಮದುವೆ ಸಮಾರಂಭಗಳ ಸಾಕ್ಷ್ಯಚಿತ್ರಗಳನ್ನು ‘ಬಿಬಿಸಿ ಎಂಟರ್‌ಟೇನ್‌ಮೆಂಟ್’ ವಾಹಿನಿ ಏ. 16ರಿಂದಲೇ ಪ್ರಸಾರ ಮಾಡುತ್ತಿದೆ.ವಿಲಯಮ್ಸ್ ಮತ್ತು ಆತನ ಭಾವಿ ಪತ್ನಿಯ ಸ್ನೇಹ ಬೆಳೆದುಬಂದ ಬಗೆಯಿಂದ ಹಿಡಿದು ರಾಜ ವೈಭವದ ಮದುವೆಯ ಸಿದ್ಧತೆಗಳ ವಿವರಗಳೆಲ್ಲ ಇದರಲ್ಲಿವೆ.

ಪ್ರಸಾರ ಸಮಯ: ನಿತ್ಯ ಮಧ್ಯಾಹ್ನ 12.30.ಡಿಸ್ಕವರಿಯಲ್ಲಿ ವಿಕಿಲೀಕ್ಸ್

ವಿಕಿಲೀಕ್ಸ್ ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದಾಗ ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಸಾಕಷ್ಟು ತಲ್ಲಣ ಕಂಡುಬಂದಿತ್ತು. ವಿವಿಧೆಡೆ ಅಮೆರಿಕ ನಡೆಸಿದ ಗೂಢಚರ್ಯೆಯ ಮಾಹಿತಿಗಳು ಇದರಲ್ಲಿದ್ದವು. ಡಿಸ್ಕವರಿ ಚಾನೆಲ್ ಈಗ ಇದನ್ನೇ ಆಧರಿಸಿ ಭಾನುವಾರ ರಾತ್ರಿ 10ಕ್ಕೆ ‘ವಿಕಿಲೀಕ್ಸ್: ವಾರ್, ಲೈಸ್ ಅಂಡ್ ವಿಡಿಯೊಟೇಪ್’ ಎಂಬ ಕುತೂಹಕಾರಿ ಕಾರ್ಯಕ್ರಮ  ಪ್ರಸಾರ ಮಾಡುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry