ಮಂಗಳವಾರ, ಜನವರಿ 28, 2020
23 °C

ವಾಲಿಬಾಲ್‌: ಕರ್ನಾಟಕ ತಂಡಕ್ಕೆ ಸನೋಜ್‌ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ ತಂಡದ ವಿ.ಆರ್‌. ಸನೋಜ್ ಉತ್ತರ ಪ್ರದೇಶದ ಮೊರಾದಬಾದ್‌ನಲ್ಲಿ ಡಿಸೆಂಬರ್‌ 21ರಿಂದ 29ರ ವರೆಗೆ ನಡೆಯಲಿರುವ 62ನೇ ಸೀನಿಯರ್‌ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.ಮಹಿಳಾ ತಂಡಕ್ಕೆ ಮೈಸೂರು ಕ್ರೀಡಾ ವಸತಿ ನಿಲಯದ ಮಲ್ಲಿಕಾ ಶೆಟ್ಟಿ ನಾಯಕಿಯಾಗಿದ್ದಾರೆ. ಮಹಾವೀರ ತೀರ್ಥಂ ಕರ ವಿಶ್ವವಿದ್ಯಾಲಯದಲ್ಲಿ ಪಂದ್ಯ ಗಳು ನಡೆಯಲಿವೆ. ಪುರುಷರ ತಂಡ ‘ಎಫ್‌’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಗುಜರಾತ್‌, ಹಿಮಾಚಲ ಪ್ರದೇಶ, ಚಂಡೀಗಡ ಮತ್ತು ಅಸ್ಸಾಂ ತಂಡಗಳಿವೆ.ರಾಜ್ಯ ಮಹಿಳಾ ತಂಡವು ‘ಈ’ ಗುಂಪಿನಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ಮಧ್ಯ ಪ್ರದೇಶ ತಂಡಗಳು ಸ್ಥಾನ ಪಡೆದಿವೆ.ತಂಡಗಳು ಇಂತಿವೆ: ಪುರುಷರ ತಂಡ: ವಿ.ಆರ್‌. ಸನೋಜ್‌ (ನಾಯಕ), ಆರ್‌. ವಿನಾಯಕ್‌ (ಉಪ ನಾಯಕ), ಶ್ರವಣ್‌ ರಾವ್‌, ಸೂರಜ್‌ ಜಿ. ನಾಯಕ್‌, ಎ. ಕಾರ್ತಿಕ್‌, ನವೀನ್‌ ಕುಮಾರ್‌, ನಾಗೇಶ್‌, ಟಿ.ಡಿ. ರವಿಕುಮಾರ್‌, ಮಾರುತಿ ಜಿ. ನಾಯಕ್‌, ಎನ್‌. ಜಗದೀಶ್‌, ಶ್ರವಣ್‌ ಯಾದವ್‌, ಗಣೇಶ್‌ ಗೌಡ, ಬಸವರಾಜ ಹೊಸಮಠ (ಕೋಚ್‌), ಪ್ರವೀಣ್‌ ಸಿಂಗ್‌ (ಸಹಾಯಕ ಕೋಚ್‌) ಹಾಗೂ ಆರ್‌.ಡಿ. ಶರ್ಮ (ಮ್ಯಾನೇಜರ್‌).ಮಹಿಳಾ ತಂಡ: ಮಲ್ಲಿಕಾ ಶೆಟ್ಟಿ (ನಾಯಕಿ), ಅನುಷಾ (ಉಪನಾಯಕಿ), ವರಲಕ್ಷ್ಮಿ, ಯಶಸ್ಸಿನಿ, ನಳಿನಾ, ಪವಿತ್ರಾ, ಸಿ.ಡಿ. ಕಾವ್ಯಾ, ಮೇಘನಾ, ಅನಿತಾ ಪಾಟೀಲ್‌, ಶರೋನಾ, ಪ್ರಿಯಾಂಕ, ಮೇಘಾ, ಕೆ.ಸಿ. ಅಶೋಕ್‌ (ಕೋಚ್‌), ಎಚ್‌.ಎನ್‌. ಹೇಮಲತಾ (ಸಹಾಯಕ ಕೋಚ್‌) ಮತ್ತು ಕೆ.ಎಸ್‌. ಶಶಿ (ಚೆಫ್‌ ಡಿ ಮಿಷನ್‌).

ಪ್ರತಿಕ್ರಿಯಿಸಿ (+)