ಬುಧವಾರ, ಅಕ್ಟೋಬರ್ 23, 2019
25 °C

ವಾಲಿಬಾಲ್: ಕರ್ನಾಟಕ ತಂಡಕ್ಕೆ ನಿರಾಸೆ

Published:
Updated:

ಬೆಂಗಳೂರು: ಕರ್ನಾಟಕ ಮಹಿಳಾ ತಂಡದವರು ರಾಯಪುರದಲ್ಲಿ ನಡೆಯುತ್ತಿರುವ 60ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಕಂಡರು.ಸೋಮವಾರ ನಡೆದ ಪಂದ್ಯದಲ್ಲಿ ಪಶ್ವಿಮ ಬಂಗಾಳ 25-14, 17-25, 25-21, 25-20ರಲ್ಲಿ ಕರ್ನಾಟಕದ ಎದುರು ಗೆಲುವು ಪಡೆದರು. ಎರಡನೇ ಸೆಟ್‌ನಲ್ಲಿ ಕರ್ನಾಟಕ ಗೆಲುವು ಸಾಧಿಸಿದರೂ, ಪಂದ್ಯ ಗೆದ್ದುಕೊಳ್ಳಲು ಆಗಲಿಲ್ಲ.ಪುರುಷರ ವಿಭಾಗದಲ್ಲಿ ಕಳೆದ ಸಲದ ಚಾಂಪಿಯನ್ ತಮಿಳುನಾಡು ಈ ಸಲವೂ ನಾಲ್ಕರಘಟ್ಟ ಪ್ರವೇಶಿಸಿದೆ. ಈ ತಂಡ ಎಂಟರ ಘಟ್ಟದ ಪಂದ್ಯದಲ್ಲಿ 21-25, 25-13, 26-28, 25-20ರಲ್ಲಿ ಪಂಜಾಬ್ ತಂಡವನ್ನು ಮಣಿಸಿತು.

ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸರ್ವಿಸಸ್ 25-23, 25-27, 19-25, 25-17, 15-12ರಲ್ಲಿ ಹರಿಯಾಣಕ್ಕೆ ಸೋಲುಣಿಸಿತು.ಮಹಿಳೆಯರ ವಿಭಾಗದಲ್ಲಿ ರೈಲ್ವೆಸ್ 25-10, 25-15, 25-8ರಲ್ಲಿ ಉತ್ತರ ಪ್ರದೇಶದ ಮೇಲೂ, ಆಂಧ್ರ ಪ್ರದೇಶ 25-22, 28-30, 25-13, 25-17ರಲ್ಲಿ ಹಿಮಾಚಲ ಪ್ರದೇಶದ ವಿರುದ್ಧವೂ ಜಯಿಸಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)