ಶನಿವಾರ, ಜನವರಿ 25, 2020
16 °C

ವಾಲಿಬಾಲ್: ಕರ್ನಾಟಕ ತಂಡಗಳಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಬಲ ಪೈಪೋಟಿ ಎದುರಾದರೂ ಪ್ರಭಾವಿ ಪ್ರದರ್ಶನ ನೀಡಿದ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡದವರು ಪಶ್ವಿಮ ಬಂಗಾಳದ ದುರ್ಗಾಪುರದಲ್ಲಿ    ನಡೆಯುತ್ತಿರುವ 38ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಬಾಲಕರ ತಂಡ 25-15, 25-17, 25-20ರಲ್ಲಿ ಛತ್ತೀಸ್‌ಗಡ ತಂಡವನ್ನು ಮಣಿಸಿತು.ಬಾಲಕಿಯರು 25-12, 25-16, 25-5 ಪಾಯಿಂಟ್‌ಗಳಿಂದ ಉತ್ತರ ಖಾಂಡ್ ತಂಡವನ್ನು ಮಣಿಸಿದರು.

ಪುರುಷರ ತಂಡಕ್ಕೆ ಮೂರು ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ಎದುರಾ ಯಿತು. ಆದರೆ, ಮಹಿಳಾ ತಂಡ ಮೊದ ಲೆರೆಡು ಸೆಟ್‌ಗಳಲ್ಲಿ ಅಲ್ಪ ಪ್ರತಿರೋಧ ಎದುರಿಸಿತು. ಆದರೆ, ಮೂರನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಒಡ್ಡಲು ಉತ್ತರಾಖಂಡ ವಿಫಲವಾಯಿತು.ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಪಂಜಾಬ್25-23, 25-21, 25-18ರಲ್ಲಿ ಉತ್ತರಾಖಾಂಡದ ಮೇಲೂ, ತಮಿಳುನಾಡು 25-19, 25-18, 25-11ರಲ್ಲಿ ಅಸ್ಸಾಂ ವಿರುದ್ಧವೂ ಗೆಲುವು ಪಡೆದವು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)