ವಾಲಿಬಾಲ್: ಕುಮಟಾ ತಂಡಕ್ಕೆ ಜಮುರಾ ಪ್ರಶಸ್ತಿ

7

ವಾಲಿಬಾಲ್: ಕುಮಟಾ ತಂಡಕ್ಕೆ ಜಮುರಾ ಪ್ರಶಸ್ತಿ

Published:
Updated:

ಚಿತ್ರದುರ್ಗ: ಕುಮಟಾ ತಂಡ ಇಲ್ಲಿನ ಎಸ್‌ಜೆಎಂ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟದಲ್ಲಿ `ಜಮುರಾ ಕಪ್~ ಅನ್ನು ಪಡೆದುಕೊಂಡಿತು.ಶನಿವಾರ ನಡೆದ ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಹಾಸನದ ದಾಸಾಪುರ ತಂಡದ ವಿರುದ್ಧ 2-1 ಸೆಟ್‌ಗಳಿಂದ ಕುಮಟಾ ತಂಡ ಜಯಗಳಿಸಿ, ರೂ 30 ಸಾವಿರ ನಗದು ಮತ್ತು ಟ್ರೋಫಿ ಪಡೆದುಕೊಂಡಿತು. ಮಂಗಳೂರು ತಂಡ ಮೂರನೇ ಸ್ಥಾನ ಹಾಗೂ ಬೆಂಗಳೂರಿನ ಕೆಂಪೇಗೌಡ ತಂಡ ನಾಲ್ಕನೇ ಸ್ಥಾನ ಪಡೆಯಿತು.ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಪಿಇಎಸ್‌ಎ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಫೈನಲ್‌ನಲ್ಲಿ ಬೆಂಗಳೂರಿನ ಪಿಎಸ್‌ಎ ಕಾರ್ಮೆಲ್ ತಂಡದ ವಿರುದ್ಧ 2-1 ಸೆಟ್‌ಗಳಿಂದ ಪಿಇಎಸ್‌ಎ ತಂಡ ಜಯಗಳಿಸಿತು. ತುಮಕೂರು ಜಿಲ್ಲೆಯ ಗುಬ್ಬಿಯ ಎಸ್‌ಸಿವೈಸಿ ತಂಡ ತೃತೀಯ ಹಾಗೂ ಚಿತ್ರದುರ್ಗ ಜಿಲ್ಲೆಯ ಮುದ್ದಾಪುರ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry