ವಾಲಿಬಾಲ್: ಕೆಎಸ್‌ಇಬಿಗೆ ಗೆಲುವು

7

ವಾಲಿಬಾಲ್: ಕೆಎಸ್‌ಇಬಿಗೆ ಗೆಲುವು

Published:
Updated:

ಮಂಗಳೂರು: ತಿರುವನಂತಪುರದ ಕೆ.ಎಸ್.ಇ.ಬಿ. ತಂಡ, ಐದನೇ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೂರ್ನಿಯ ಮಹಿಳೆಯರ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ತ್ರಿಷೂರಿನ ಸೇಂಟ್ ಜೋಸೆ ಕಾಲೇಜು ತಂಡವನ್ನು 3-0 ನೇರ ಸೆಟ್‌ಗಳಿಂದ ಸುಲಭವಾಗಿ ಸೋಲಿಸಿತು.ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯ ದಲ್ಲಿ ಉರ್ವಸ್ಟೋರ್ಸ್ ಮೈದಾನದಲ್ಲಿ ಶಿವಪ್ರಸಾದ ಬಾಳಿಗಾ ಸ್ಮರಣಾರ್ಥ ನಡೆಯುತ್ತಿರುವ ಈ ಟೂರ್ನಿಯಲ್ಲಿ ತಿರುವನಂತಪುರದ ತಂಡ 25-14, 25-21, 25-19 ರಲ್ಲಿ   ಜಯಗಳಿಸಲು ಕೇವಲ 58 ನಿಮಿಷ ತೆಗೆದುಕೊಂಡಿತು.ಗುರುವಾರ ಮಧ್ಯರಾತ್ರಿ ಮುಗಿದ ಪುರುಷರ ವಿಭಾಗದ ಎರಡನೇ ಪಂದ್ಯದಲ್ಲಿ ಚೆನ್ನೈನ ಐಓಬಿ ವಿರುದ್ಧ ಕೊಚ್ಚಿಯ ಭಾರತೀಯ ನೌಕಾಪಡೆ ತಂಡ ಎರಡನೇ ಸೆಟ್‌ನಲ್ಲಿ `ಸೆಟ್ ಪಾಯಿಂಟ್~ ಅಗತ್ಯವಿದ್ದಾಗ ಮಾಡಿದ ಸರ್ವಿಸ್ ಎಡವಟ್ಟಿನಿಂದ ಹಿನ್ನಡೆ ಪಡೆಯಿತಲ್ಲದೇ ನಂತರ ಪಂದ್ಯವನ್ನೂ ಕಳೆದುಕೊಂಡಿತು.ಚೆನ್ನೈನ ಬ್ಯಾಂಕ್ ತಂಡ 21-25, 28-26, 25-23, 25-14ರಡ್ಲೀ 85 ನಿಮಿಷಗಳ ಪಂದ್ಯದಲ್ಲಿ ಜಯಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry