ವಾಲಿಬಾಲ್: ಕೆಎಸ್‌ಇಬಿ ಮಹಿಳಾ ತಂಡಕ್ಕೆ ಪ್ರಶಸ್ತಿ

7

ವಾಲಿಬಾಲ್: ಕೆಎಸ್‌ಇಬಿ ಮಹಿಳಾ ತಂಡಕ್ಕೆ ಪ್ರಶಸ್ತಿ

Published:
Updated:

ಮಂಗಳೂರು: `ಸೇವ್ ಎನರ್ಜಿ~ ಎಂಬ ಬರಹಹೊಂದಿದ್ದ ಕೆಂಪು ಜೆರ್ಸಿ ಧರಿಸಿದ್ದ ಕೇರಳ ವಿದ್ಯುಚ್ಛಕ್ತಿ ಮಂಡಳಿ (ಕೆಎಸ್‌ಇಬಿ- ತಿರುವನಂತಪುರ) ಮಹಿಳಾ ತಂಡ, ಅಖಿಲ ಭಾರತ ಆಹ್ವಾನ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ತಲಶೇರಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಂಡ ವನ್ನು ಸೋಲಿಸಲು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿನ `ಎನರ್ಜಿ~ ಬಳಸಿಕೊಳ್ಳಬೇಕಾಯಿತು.

ಶಿವಪ್ರಸಾದ್ ಬಾಳಿಗ ಸ್ಮರಣಾರ್ಥ, ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯ ದಲ್ಲಿ ಉರ್ವಸ್ಟೋರ್ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಮಹಿಳೆಯರ ಫೈನಲ್‌ನಲ್ಲಿ ಕೆಎಸ್‌ಇಬಿ ತಂಡ 25- 14, 22-25, 25-14, 25-19 ರಲ್ಲಿ `ಸಾಯ್~ ತಂಡವನ್ನು ಸೋಲಿಸುವ ಹಾದಿಯಲ್ಲಿ ಒಂದು ಸೆಟ್ ಕಳೆದು ಕೊಂಡಿತು.

ಶ್ರುತಿ ಮೋಳ್ ಅವರಿಗೆ ಉತ್ತಮ ಬೆಂಬಲ ನೀಡಿದರು. ಸಾಯ್ ಪರ ಪೂರ್ಣಿಮಾ ಮತ್ತು `ಲಿಬೆರೊ~ ಜಿಜಿಮೋಳ್ ಆಟ ಗಮನ ಸೆಳೆಯಿತು. ಎರಡನೇ ಸೆಟ್‌ನಲ್ಲಿ ಸ್ಪೂರ್ತಿಯುತ ಆಟವಾಡಿದ ತಲಶೇರಿಯ ತಂಡ ಸೆಟ್‌ನುದ್ದಕ್ಕೂ ಹೊಂದಿದ್ದ ಅಲ್ಪ ಮುನ್ನಡೆ ಯನ್ನು ಗೆಲುವಾಗಿ ಪರಿವರ್ತಿಸಿತು. ನಂತರ ಅದೇ ಸ್ಪೂರ್ತಿ ಉಳಿಸಿಕೊಳ್ಳಲಾಗಲಿಲ್ಲ.

ಮೂರನೇ ಸ್ಥಾನ: ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್ ತಂಡ 25-16, 22-25, 25-23, 25-23 ರಲ್ಲಿ ತ್ರಿಶೂರಿನ ಸೇಂಟ್ ಜೋಸೆಫ್ಸ್ ತಂಡವನ್ನು ಸೋಲಿಸಿತು.

ಡೆಹ್ರಾಡೂನಿನ ಒಎನ್‌ಜಿಸಿ ಮತ್ತು ಕೊಚ್ಚಿಯ ಬಿಪಿಸಿಎಲ್ ಪುರುಷರ ವಿಭಾ ಗದ ಫೈನಲ್‌ನಲ್ಲಿ ಸೆಣಸಾಡುವ ಅರ್ಹತೆ ಪಡೆದವು. ಪುರುಷರ ವಿಭಾಗದ `ಎ~ ಗುಂಪಿನ ಕೊನೆಯ ಪಂದ್ಯದಲ್ಲಿ ಪ್ರಬಲ  ಒಎನ್‌ಜಿಸಿ 25-17, 25-18, 25-21ರಲ್ಲಿ ಚೆನ್ನೈನ ಕಸ್ಟಮ್ಸ ತಂಡವನ್ನು ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ಕೊಚ್ಚಿಯ ಬಿಪಿಸಿಎಲ್ 25-23, 25-17, 25- 19 ರಲ್ಲಿ ಚೆನ್ನೈನ ಐಒಬಿ ತಂಡವನ್ನು ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry