ವಾಲಿಬಾಲ್: ಪೋಸ್ಟಲ್‌ಗೆ ಮಣಿದ ಕೆಎಸ್‌ಪಿ

7

ವಾಲಿಬಾಲ್: ಪೋಸ್ಟಲ್‌ಗೆ ಮಣಿದ ಕೆಎಸ್‌ಪಿ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ 25-23, 25-27, 25-18, 25-21 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡವನ್ನು ಮಣಿಸಿತು. ಒಂದೂವರೆ ಗಂಟೆಯ ಕಾಲ ನಡೆದ ಈ ಪೈಪೋಟಿಯಲ್ಲಿ ಎ. ಕಾರ್ತಿಕ್ ಮತ್ತು ವಿನೋದ್ ಕಿಣಿ ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.ಸೋಮವಾರ ನಡೆಯುವ ಪಂದ್ಯಗಳಲ್ಲಿ ಎಎಸ್‌ಸಿ- ಪೋಸ್ಟಲ್ ಮತ್ತು ಬಿಎಸ್‌ಎನ್‌ಎಲ್- ಎಲ್‌ಐಸಿ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry