ವಾಲಿಬಾಲ್: ಪೋಸ್ಟಲ್, ಎಲ್‌ಐಸಿ ತಂಡಗಳಿಗೆ ನಿರಾಸೆ:ಎಎಸ್‌ಸಿ, ಬಿಎಸ್‌ಎನ್‌ಎಲ್‌ಗೆ ಜಯ

7

ವಾಲಿಬಾಲ್: ಪೋಸ್ಟಲ್, ಎಲ್‌ಐಸಿ ತಂಡಗಳಿಗೆ ನಿರಾಸೆ:ಎಎಸ್‌ಸಿ, ಬಿಎಸ್‌ಎನ್‌ಎಲ್‌ಗೆ ಜಯ

Published:
Updated:

ಬೆಂಗಳೂರು: ಎಎಸ್‌ಸಿ ಮತ್ತು ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ತಂಡಗಳು ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಎಸ್‌ಸಿ ತಂಡ 3-2 ಸೆಟ್‌ಗಳಿಂದ ( 25-16, 22-25, 28-26, 18-25, 15-12) ಪೋಸ್ಟಲ್ ಎದುರು ಜಯ ಸಾಧಿಸಿತು. 100 ನಿಮಿಷಗಳವರೆಗೆ ನಡೆದ ಸುದೀರ್ಘ ಹೋರಾಟದಲ್ಲಿ ವಿಜಯಿ ತಂಡದ ಸತ್ಯರಾಜ್ ಮತ್ತು ದಿವ್ಯ ಪ್ರಸಾದ್ ಉತ್ತಮ ಪ್ರದರ್ಶನ ನೀಡಿದರು.ದಿನದ ಇನ್ನೊಂದು ಪಂದ್ಯದಲ್ಲಿ ಬಿಎಸ್‌ಎನ್‌ಎಲ್ 3-1ರಲ್ಲಿ  (25-22, 25-15, 21-25, 25-12) ಭಾರತಿಯ ಜೀವ ವಿಮಾ ನಿಗಮ (ಎಲ್‌ಐಸಿ) ತಂಡವನ್ನು ಸೋಲಿಸಿತು. ಈ ಪಂದ್ಯ 80 ನಿಮಿಷ ನಡೆಯಿತು. ಅನೂಪ್ ಹಾಗೂ ಮಂಜುನಾಥ್ ಅವರು ವಿಜಯಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಅಟ್ಲಾಂಟ ಕ್ಲಬ್‌ಗೆ ಜಯ: ಗಿರೀಶ್ ಹಾಗೂ ಕಾಶಿ ಅವರು ನೀಡಿದ ಸಮರ್ಥ ಪ್ರದರ್ಶನದ ನೆರವಿನಿಂದ ಅಟ್ಲಾಂಟ ಸ್ಪೋರ್ಟ್ಸ್ ಕ್ಲಬ್ `ಬಿ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.ಒಂದು ಗಂಟೆ ಕಾಲ ನಡೆದ ಮೂರು ಸೆಟ್‌ಗಳ ಪಂದ್ಯದಲ್ಲಿ ಅಟ್ಲಾಂಟ ತಂಡ 2-1 (22-25, 25-17, 18-16) ರಾವ್ ಫ್ರೆಂಡ್ಸ್ ಎದುರು ಜಯ ಸಾಧಿಸಿತು. ಮಂಗಳವಾರದ ಪಂದ್ಯಗಳು: `ಎ~ ಡಿವಿಷನ್: ಕೆಎಸ್‌ಪಿ-ಎಸ್‌ಡಬ್ಲ್ಯುಆರ್ (ಮಧ್ಯಾಹ್ನ 1.30) ಹಾಗೂ ಐಟಿಐ-ಎಸ್‌ಎಐ (ಮ. 3.00ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry