ವಾಲಿಬಾಲ್: ಬಿಎಸ್‌ಎನ್‌ಎಲ್, ಮೈಸೂರು ತಂಡಗಳಿಗೆ ಪ್ರಶಸ್ತಿಯ ಗರಿ

7

ವಾಲಿಬಾಲ್: ಬಿಎಸ್‌ಎನ್‌ಎಲ್, ಮೈಸೂರು ತಂಡಗಳಿಗೆ ಪ್ರಶಸ್ತಿಯ ಗರಿ

Published:
Updated:

ಬ್ಯಾಡಗಿ (ಹಾವೇರಿ ಜಿಲ್ಲೆ):  ಬಿಎಸ್‌ಎನ್‌ಎಲ್ ಹಾಗೂ ಮೈಸೂರು ಜಿಲ್ಲಾ ತಂಡದವರು ವಿದ್ಯಾನಗರ ಸ್ಪೋರ್ಟ್ಸ್ ಕ್ಲಬ್ ಹಾಗೂ ರಾಜ್ಯ ಅಮೆಚೂರ್ ವಾಲಿಬಾಲ್ ಸಂಸ್ಥೆ ಆಶ್ರಯದ ಸೀನಿಯರ್ ವಿಭಾಗದ `ಅಸೋಸಿಯೇಶನ್ ಕಪ್' ವಾಲಿಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ತಂಡ ಮದ್ರಾಸ್ ಎಂಜನಿಯರಿಂಗ್ ಗ್ರೂಪ್ (ಎಂಇಜಿ) ತಂಡವನ್ನು 3-1 ಸೆಟ್‌ಗಳಿಂದ ಮಣಿಸಿತು. ಮೊದಲ ಸೆಟ್‌ನ್ನು 25-21 ಪಾಯಿಂಟ್‌ಗಳಿಂದ ಗೆದ್ದರೂ ಎಂಇಜಿ ಬಳಿಕ ಹಿನ್ನಡೆ ಅನುಭವಿಸಿತು. ರವಿ ಹಾಗೂ ಅನೂಪ್ ಅವರ ಪರಿಣಾಮಕಾರಿ ಸ್ಮ್ಯಾಷ್‌ಗಳ ಮೂಲಕ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿದ ಬಿಎಸ್‌ಎನ್‌ಎಲ್ 25-21, 25-22 ಹಾಗೂ 25-17 ಪಾಯಿಂಟ್‌ಗಳಿಂದ ಮುಂದಿನ ಮೂರು ಸೆಟ್‌ಗಳನ್ನು ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.ಸೆಮಿಫೈನಲ್‌ನಲ್ಲಿ ಬಿಎಸ್‌ಎನ್‌ಎಲ್ ತಂಡ ಕೆಎಸ್‌ಪಿ  ತಂಡದ ವಿರುದ್ಧ 3-0 ಸೆಟ್‌ಗಳ ಜಯ ಸಾಧಿಸಿದರೆ, ಎಂಇಜಿ ತಂಡ ಎಎಸ್‌ಸಿಯನ್ನು 3-1 ಸೆಟ್‌ಗಳಿಂದ ಸೋಲಿಸಿದ್ದವು.ಮೈಸೂರು ಮಹಿಳೆಯರಿಗೆ ಪ್ರಶಸ್ತಿ: ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಮೈಸೂರು ಜಿಲ್ಲಾ ತಂಡ ಬೆಂಗಳೂರು ನಗರ ತಂಡದ ವಿರುದ್ಧ 3-0 ನೇರ ಸೆಟ್‌ಗಳ ಅಂತರದಿಂದ ಜಯಗಳಿಸಿತು. ಜೀವಿತಾ ಅವರ ಉತ್ತಮ ಸ್ಮ್ಯಾಷ್‌ಗಳ ನೆರವಿನಿಂದ ಮೈಸೂರು ತಂಡ 25-17, 25-17, 25-14ರಲ್ಲಿ ಜಯ ಸಾಧಿಸಿತು.ಸೆಮಿಫೈನಲ್‌ನಲ್ಲಿ ಮೈಸೂರು ತಂಡ ಧಾರವಾಡ ಜಿಲ್ಲಾ ತಂಡವನ್ನು 3-1ರಲ್ಲಿ ಹಾಗೂ ಬೆಂಗಳೂರು ತಂಡ ಕರ್ನಾಟಕ ಜೂನಿಯರ್ ತಂಡವನ್ನು 3-2 ಸೆಟ್‌ಗಳಿಂದ ಮಣಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry