ವಾಲಿಬಾಲ್: ಭಾರತಕ್ಕೆ ಗೆಲುವು

7

ವಾಲಿಬಾಲ್: ಭಾರತಕ್ಕೆ ಗೆಲುವು

Published:
Updated:

ಬೆಂಗಳೂರು: ಭಾರತದ ಮಹಿಳೆಯರ ವಾಲಿಬಾಲ್ ತಂಡ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ 16ನೇ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ 3-0 ಸೆಟ್‌ಗಳಿಂದ ಇರಾನ್ ಎದುರು ಗೆಲುವು ಸಾಧಿಸಿತು.ಪ್ರೀತಿ ಮತ್ತು ಅನುಶ್ರೀ ಅವರು ತೋರಿದ ಉತ್ತಮ ಪ್ರದರ್ಶನ ಈ ಗೆಲುವಿಗೆ ಕಾರಣವಾಯಿತು. ಮೊದಲ ಸೆಟ್‌ನಲ್ಲಿ 25-8ರಲ್ಲಿ ಗೆಲುವು ಪಡೆದ ಭಾರತಕ್ಕೆ ಈ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಎದುರಾಯಿತು. ಆದರೆ, ಎರಡನೇ ಸೆಟ್‌ನಲ್ಲಿ 25-8ರಲ್ಲಿ ಮತ್ತು ಮೂರನೇ ಸೆಟ್‌ನಲ್ಲಿ 25-15ರಲ್ಲಿ ಸುಲಭ ಗೆಲುವು ಸಾಧಿಸಿತು.ಐದು ಮತ್ತು ಆರನೇ ಸ್ಥಾನಕ್ಕಾಗಿನ ಹಣಾಹಣಿಯಲ್ಲಿ ಭಾರತ ಮತ್ತು ಕೊರಿಯಾ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry