ವಾಲಿಬಾಲ್: ಭಾರತ ತಂಡಕ್ಕೆ ಗೆಲುವು

7

ವಾಲಿಬಾಲ್: ಭಾರತ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಭಾರತ ತಂಡದವರು ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ 9ನೇ ಏಷ್ಯನ್ ಯೂತ್ ಬಾಲಕಿಯರ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ 3-1 ಸೆಟ್‌ಗಳಿಂದ ಕಜಕಸ್ತಾನ ತಂಡವನ್ನು ಸೋಲಿಸಿದರು.

ಭಾರತ ಮೊದಲ ಸೆಟ್‌ನಲ್ಲಿ 19-25ರಲ್ಲಿ ಸೋಲು ಕಂಡಿತು. ನಂತರ ಮೂರು ಸೆಟ್‌ಗಳಲ್ಲಿ 25-21, 25-15  26-24ರಲ್ಲಿ ಸತತ ಗೆಲುವು ಸಾಧಿಸಿತು.ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರಶಸ್ತಿಯ ಕನಸು ಈಗಾಗಲೇ ಅಸ್ತಮಿಸಿದೆ. ಆದ್ದರಿಂದ ಐದು ಹಾಗೂ ಆರನೇ ಸ್ಥಾನಕ್ಕಾಗಿ ಭಾರತ ತಂಡ ಥಾಯ್ಲೆಂಡ್ ಎದುರು ಶನಿವಾರ ಸೆಣಸಲಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.ಮಳೆ ಅಡ್ಡಿ: ಉದ್ಯಾನನಗರಿಯಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯಗಳಿಗೆ ಮಳೆ ಅಡ್ಡಿಯಾಯಿತು.ಮಧ್ಯಾಹ್ನ ಭಾರೀ ಮಳೆ ಸುರಿದ ಕಾರಣ ಪಂದ್ಯಗಳನ್ನು ಭಾನುವಾರಕ್ಕೆ ಮುಂದೂಡಲಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಶನಿವಾರ ಎಸ್‌ಡಬ್ಲ್ಯುಆರ್-ಎಂಇಜಿ ಮತ್ತು ಕೆಎಸ್‌ಪಿ-ಎಲ್‌ಐಸಿ  ನಡೆಯಲಿದೆ.ದಸರಾ ಹಾಫ್ ಮ್ಯಾರಥಾನ್ ಮುಂದೂಡಿಕೆ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 21ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಹಾಫ್ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಮುಂದೂಡಲಾಗಿದೆ.ಸಮಯದ ಅಭಾವ ಮತ್ತು ಕೆಲವು ಅನಿವಾರ್ಯ ಕಾರಣಗಳಿಂದಾಗಿ ಹಾಫ್ ಮ್ಯಾರಥಾನ್ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry