ವಾಲಿಬಾಲ್: ಮುಂದುವರಿದ ಗೆಲುವಿನ ಓಟ

7

ವಾಲಿಬಾಲ್: ಮುಂದುವರಿದ ಗೆಲುವಿನ ಓಟ

Published:
Updated:

ಬೆಂಗಳೂರು: ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡದವರು ಚತ್ತೀಸಗಡದ ಚಂಪಾದಲ್ಲಿ ನಡೆಯುತ್ತಿರುವ 20ನೇ ರಾಷ್ಟ್ರೀಯ ಮಿನಿ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಮಂಗಳವಾರದ ಪಂದ್ಯದಲ್ಲಿಯು ಗೆಲುವು ಸಾಧಿಸಿದರು.ಕರ್ನಾಟಕ ಬಾಲಕರ ತಂಡ 25-21, 25-12, 26-24ರಲ್ಲಿ ಹರಿಯಾಣ ತಂಡವನ್ನು ಸೋಲಿಸಿತು. ಈ ಪಂದ್ಯವು 57 ನಿಮಿಷಗಳ ಕಾಲ ನಡೆಯಿತು. ಬಾಲಕಿಯರ ವಿಭಾಗದವರು 25-19, 25-11, 25-13ಪಾಯಿಂಟ್‌ಗಳಿಂದ ಮಿಜೋರಾಂ ತಂಡವನ್ನು ಸೋಲಿಸಿದರು. ಈ ಪಂದ್ಯ 55 ನಿಮಿಷಗಳಲ್ಲಿ ಅಂತ್ಯ ಕಂಡಿತು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.ಇದೇ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಆಂಧ್ರ ಪ್ರದೇಶ 25-20, 25-13, 25-20ರಲ್ಲಿ ಮಣಿಪುರ ಮೇಲೂ, ಮಹಾರಾಷ್ಟ್ರ 25-21, 19-25, 25-18, 25-15ರಲ್ಲಿ ಮಧ್ಯ ಪ್ರದೇಶ ವಿರುದ್ಧವೂ ಗೆಲುವು ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry