ವಾಲಿಬಾಲ್: ಸೆಮಿಫೈನಲ್‌ಗೆ ಭಾರತ

7

ವಾಲಿಬಾಲ್: ಸೆಮಿಫೈನಲ್‌ಗೆ ಭಾರತ

Published:
Updated:

ಉರೆಮಿಯಾ, ಇರಾನ್: ಭಾರತ ತಂಡದವರು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದ್ದಾರೆ.



ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ 19-25, 25-13, 25-22, 30-28ರಲ್ಲಿ ಕೊರಿಯಾ ತಂಡವನ್ನು ಪರಾಭವಗೊಳಿಸಿತು. ಗುರುವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡದವರು ಜಪಾನ್ ಎದುರು ಪೈಪೋಟಿ ನಡೆಸಲಿದ್ದಾರೆ.



ಭಾರತ ಲೀಗ್ ಹಂತದಲ್ಲಿ ಉಜ್ಬೆಕಿಸ್ತಾನ, ಚೀನಾ ತೈಪಿ ಹಾಗೂ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಮಾತ್ರ ಈ ತಂಡದವರು 26-28, 13-25, 22-25ರಲ್ಲಿ ಇರಾನ್‌ಗೆ ಶರಣಾಗಿದ್ದರು. ಆದರೆ ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.



ಮಹಿಳೆಯರಿಗೆ ಜಯ: ಭಾರತ ಮಹಿಳಾ ತಂಡದವರು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಭಾರತ 25-7, 25-27, 25-5, 25-21ರಲ್ಲಿ ಮಂಗೋಲಿಯಾ ಎದುರು ಗೆದ್ದರು.ಮೊದಲ ಪಂದ್ಯದಲ್ಲಿ 25-19, 25-20. 25-18ರಲ್ಲಿ ವಿಯೆಟ್ನಾಂ ಎದುರು ಜಯ ಗಳಿಸಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry