ಭಾನುವಾರ, ಮೇ 9, 2021
19 °C

ವಾಲೀಶ್ವರಸ್ವಾಮಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಪ್ರಸನ್ನ ಪಾರ್ವತಿ ಸಮೇತ ವಾಲೀಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಕಳೆದ ಮೂರು ದಿನಗಳಿಂದ ರಥೋತ್ಸವಕ್ಕೆ ಪೂರಕವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ರಥೋತ್ಸವದ ಬೆನ್ನಲೇ ಪರ್ವಟೋತ್ಸವ, ಅಶ್ವ ವಾಹನೋತ್ಸವ, ವಸಂತೋತ್ಸವ, ಹಂಸ ವಾಹನೋತ್ಸವ, ಧ್ವಜಾರೋಹಣ, ಕಂಕಣ ವಿಸರ್ಜನೆ, ಪಾರ್ವತಿದೇವಿ, ವಾಲೀಶ್ವರಸ್ವಾಮಿ ರಾವಣ ವಾಹನೋತ್ಸವ ಮತ್ತು ದೀಪೋತ್ಸವ ಏರ್ಪಡಿಸಲಾಗಿತ್ತು.ಗಡಿ ಗ್ರಾಮದಲ್ಲಿ 3 ದಿನಗಳ ಕಾಲ ನಡೆದ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳು ನಾಗರಿಕರು ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನ ಭಾಗವಹಿಸಿದ್ದರು. ವಿಧಾನ ಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಿಂಬಾಲ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಮುಖಂಡ ಕೆ.ಕೆ.ಮಂಜು ರಥೋತ್ಸವದಲ್ಲಿ ಭಾಗವಹಿಸಿದ್ದರು.ಸೇವಾ ಕಾರ್ಯಕರ್ತರಾದ ಎ.ಸಿ.ಮುನಿರೆಡ್ಡಿ, ಚಂದ್ರಶೇಖರ ರೆಡ್ಡಿ, ಎಸ್.ಎಚ್.ಶಂಕರನಾರಾಯಣ ರೆಡ್ಡಿ, ಎಂ.ನಾರೆಪ್ಪ, ಅಜ್ಜಪ್ಪರೆಡ್ಡಿ, ಚಿನ್ನವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ಸುಧಾಕರರೆಡ್ಡಿ, ಎನ್.ವೆಂಕಟಶಾಮಿರೆಡ್ಡಿ, ಎಸ್.ಆರ್.ವೆಂಕಟೇಶ ಬಾಬು, ಗಂಗಿರೆಡ್ಡಿ, ಎಸ್.ಕೆ.ಆಂಜನೇಯರೆಡ್ಡಿ, ಗ್ರಾಮಸ್ಥರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.