ವಾಲ್ಮೀಕಿ ಜಯಂತಿ: ಭವ್ಯ ಮೆರವಣಿಗೆ

7

ವಾಲ್ಮೀಕಿ ಜಯಂತಿ: ಭವ್ಯ ಮೆರವಣಿಗೆ

Published:
Updated:

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಮಂಗಳವಾರ ವಾಲ್ಮೀಕಿ, ಏಕಲವ್ಯ, ಶಬರಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್, ವೀರ ಮದಕರಿ ನಾಯಕ,  ಭಕ್ತ ಕನಕದಾಸ ಮತ್ತಿತರರ ಸ್ತಬ್ಧ ಚಿತ್ರಗಳ ಭವ್ಯ ಮೆರವಣಿನಡೆಯಿತು.ಬಿಡಿಎಎ ಆಟದ ಮೈದಾನದಲ್ಲಿ ಮಧ್ಯಾಹ್ನ ಸಂಸದೆ ಜೆ. ಶಾಂತ, ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ ಹಾಗೂ ಶಾಸಕ ಜಿ. ಸೋಮಶೇಖರ ರೆಡ್ಡಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.

 

ಮೇಯರ್ ಪಾರ್ವತಿ ಇಂದೂಶೇಖರ್,ಉಪಮೇಯರ್ ಶಶಿಕಲಾ,  ಬುಡಾ  ಅಧ್ಯಕ್ಷ ಗುರುಲಿಂಗನಗೌಡ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ನಾಯ್ಕ, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎನ್. ಗಿರಿಮಲ್ಲಪ್ಪ, ಸದಾಶಿವಪ್ಪ,  ಕಮಲಾ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪೊಲಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜಪ್ಪ, ಉಪ ವಿಭಾಗಾಧಿಕಾರಿ ಶಶಕಾಂತ್ ಸೆಂಥಿಲ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry