ಸೋಮವಾರ, ಮೇ 23, 2022
24 °C

ವಾಲ್ಮೀಕಿ ನಾಯಕ ಸಂಘದ ಹೇಳಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕುರುಬ ಜನಾಂಗದವರು ‘ನಾಯಕ’ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಸೌಲಭ್ಯವನ್ನು ಕಬಳಿಸುತ್ತಿದ್ದಾರೆ ಎಂದು ಶಹಾಪುರ ತಾಲ್ಲೂಕು ವಾಲ್ಮೀಕಿ ನಾಯಕರ ಸಂಘ ನೀಡಿರುವ ಹೇಳಿಕೆಯನ್ನು ಮತ್ತು ಕಬ್ಬಲಿಗ ಉಪಜಾತಿಗಳಾದ ಕಾಡುಕುರುಬ, ಗೊಂಡ ಮತ್ತು ಟೋಕರೆ ಕೋಳಿ ಜನಾಂಗದ ಹಿತರಕ್ಷಣಾ ಸಮಿತಿಯ ಗುಲ್ಬರ್ಗ ಮತ್ತು ಯಾದಗಿರಿ ಘಟಕಗಳು ಖಂಡಿಸಿವೆ. ಈ ಸಂಬಂಧ ಹೇಳಿಕೆ ನೀಡಿರುವ ಸಿದ್ರಾಮಪ್ಪ ಸಣ್ಣೂರ ಮತ್ತು ಮಹಾಂತೇಶ ಎಸ್.ಕವಲಗಿ, “ನಾಯಕ ಎಂಬ ಪದ ಜಾತಿಸೂಚಕವಲ್ಲ. ಇದು ವೃತ್ತಿಸೂಚಕ. ಹಲವು ಜಾತಿಗಳಲ್ಲಿ ನಾಯಕ ಎಂಬ ಪದ ಕೊನೆಯಲ್ಲಿ ಬರುತ್ತದೆ.ಅಂದ ಮಾತ್ರಕ್ಕೆ ಅವರು ಪರಿಶಿಷ್ಟ ಪಂಗಡದ ಕೋಮಿಗೆ ಸೇರುವುದಿಲ್ಲ. ಯಾರು ನಾಯ್ಕಡ ಜನಾಂಗದಲ್ಲಿ ನಾಯಕ ಎಂದು ಇರುತ್ತಾರೋ ಅವರಷ್ಟೇ ಪರಿಶಿಷ್ಟ ಪಂಗಡದ ಜಾತಿಪ್ರಮಾಣಪತ್ರಕ್ಕೆ ಅರ್ಹರಾಗಿರುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಇತರ ಹಿಂದುಳಿದವರ್ಗದ ಪಟ್ಟಿ ಪ್ರವರ್ಗ 1ರ ಕ್ರಮಸಂಖ್ಯೆ 85 ಬೇಡರು ಮತ್ತು 88 ಬೆಂಡರ್ ನಾಯಕ ಮಕ್ಕಳು, ಬ್ಯಾಡರ್, ಅರಸ ನಾಯಕ, ಪಾಳೆಗಾರ ಇವರೆಲ್ಲರೂ ಬರುತ್ತಾರೆ. ಕೇಂದ್ರದ ಓಬಿಸಿ ಪಟ್ಟಿ ಅನುಕ್ರಮ ಸಂಖ್ಯೆ 18ರಲ್ಲಿ ಬೇಡರು, ವಾಲ್ಮೀಕಿ, ಬೇಂಡರ್ ನಾಯಕ ಮಕ್ಕಳು ಬರುತ್ತಾರೆ. ಇವರೆಲ್ಲರೂ ನಾಯ್ಕಡ ಜನಾಂಗದ ಉಪಜಾತಿಗಳೆಂದು ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆಯುತ್ತಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.