ವಾಲ್ಮೀಕಿ ಭವನ ನಿರ್ಮಾಣಕ್ಕೆ ನೆರವು

7

ವಾಲ್ಮೀಕಿ ಭವನ ನಿರ್ಮಾಣಕ್ಕೆ ನೆರವು

Published:
Updated:

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಸಂಸದರ ಹಾಗೂ ಶಾಸಕರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು. ಭವನ ನಿರ್ಮಾಣಕ್ಕೆ ಸಕಲ ಸಹಕಾರ ನೀಡಲಾಗುವುದು ಎಂದು ಶಾಸಕ ಎನ್.ಸಂಪಂಗಿ ಘೋಷಿಸಿದರು. ಪಟ್ಟಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ, ತಾಲ್ಲೂಕು ಪಂಚಾಯಿತಿ ಇಒ ಜಯರಾಂ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯ ರಾದ ನಾರಾಯಪ್ಪ, ಗೋಪಾಲಕೃಷ್ಣ, ತಹಸೀಲ್ದಾರ್ ಟಿ.ಎ. ಹನುಮಂತರಾಯ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ಜಾಕೀರ್, ಸದಸ್ಯರಾದ ಓಬಳೇಶು, ಗಣೇಶ್, ಸರ್ಕಾರಿ ನೌಕರರ ಸಂಘದ ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣ ಸ್ವಾಮಿಶೆಟ್ಟಿ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಹೊಂಬಾಳೆ ಶ್ರೀನಿವಾಸಪ್ಪ, ಮುಖಂಡರಾದ ಚಂದ್ರಶೇಖ ರಯ್ಯ, ಚಲಪತಿ, ಗೂಳೂರು ಲಕ್ಷ್ಮೀ ನಾರಾಯಣ, ಅಶ್ವಥ್ಥಪ್ಪ, ಗೂಳೂರು ಬಾಬು ಇತರರಿದ್ದರು.ವಿಜೃಂಭಣೆಯ  ಜಯಂತಿ


ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ವಾಲ್ಮೀಕಿ ಮಹರ್ಷಿ ಜಯಂತಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ಪಟ್ಟಣದ ಮಯೂರ ವೃತ್ತದ ಬಳಿಯಿರುವ ವಾಲ್ಮೀಕಿ ಮಹರ್ಷಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಸಿದ್ದ ಡೊಳ್ಳು ಕುಣಿತ, ಗಾರುಡಿ ಬೊಂಬೆ, ವೀರಗಾಸೆ ಮುಂತಾದ ಕಲಾ ತಂಡಗಳೊಂದಿಗೆ ವಾಲ್ಮೀಕಿ ಮಹರ್ಷಿ ಭಾವಚಿತ್ರವಿರುವ ಹೂವಿನ ರಥ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಾಲ್ಮೀಕಿ ದೇವಾಲಯದಿಂದ ಮಯೂರ ವೃತ್ತ, ಹೂವಿನ ವೃತ್ತ, ಅಶೋಕ ರಸ್ತೆ, ವಾಸವಿ ರಸ್ತೆ, ಗಾರ್ಡನ್ ರಸ್ತೆ, ಸಂತೆ ಬೀದಿ, ಬಸ್ ನಿಲ್ದಾಣ, ಟಿ.ಬಿ.ರಸ್ತೆ ಮೂಲಕ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಯಿತು.ಮೆರವಣಿಗೆಗೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು. ತಹಶೀಲ್ದಾರ್ ಭೀಮಾನಾಯ್ಕ, ವಾಲ್ಮೀಕಿ ಸಂಘದ ಅಧ್ಯಕ್ಷ ಕೃಷ್ಣಪ್ಪ, ಜಿ.ಪಂ. ಸದಸ್ಯ ಸತೀಶ್, ಮಾಜಿ ಸದಸ್ಯ ಎನ್. ಮುನಿಯಪ್ಪ. ಮುಖಂಡರಾದ ಬಂಕ್ ಮುನಿಯಪ್ಪ, ತಾ.ಪಂ. ಸದಸ್ಯ ಯರ‌್ರಬಚ್ಚಪ್ಪ, ಸದಾಶಿವ, ಪಿ.ವಿ.ನಾಗರಾಜ, ಮಗಿಲಡಿಪಿ ನಂಜಪ್ಪ, ರಾಜೇಂದ್ರ ಮತ್ತಿತರರು ಇದ್ದರು.

`ರಾಮಾಯಣ ಶ್ರೇಷ್ಠ ಕಾವ್ಯ~

ಗೌರಿಬಿದನೂರು: ವಾಲ್ಮೀಕಿ ಮಹರ್ಷಿ ರಾಮಾಯಣದಿಂದ ಪ್ರೇರಿತಗೊಂಡು ಹಲವು ರಾಮಾಯಣ ರಚಿತವಾಗಿದ್ದು, ರಾಮಾಯಣ ದೇಶದ ಶ್ರೇಷ್ಠ ಮಹಾಕಾವ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ ತಿಳಿಸಿದರು.ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ತಹಶೀಲ್ದಾರ್ ಡಾ.ಬಿ.ಸುಧಾ, ಶಿಕ್ಷಕ ಸದಾಶಿವ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಹನುಮಾನ್, ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸಪ್ಪ, ಉಪಾಧ್ಯಕ್ಷೆ ಚೇತನಾ, ಪುರಸಭೆ ಅಧ್ಯಕ್ಷೆ ಪ್ರಮೀಳಾ ಬಾಲಾಜಿ, ಉಪಾದ್ಯಕ್ಷ ರಮೇಶ್, ಲಲಿತ, ಬಿಇಒ ಶಮೀನ್‌ತಾಜ್, ವಾಲ್ಮೀಕಿ ಯುವ ಒಕ್ಕೂಟದ ಅಧ್ಯಕ್ಷ ಆನಂದ್‌ಕುಮಾರ್, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಕಾಶ್‌ರೆಡ್ಡಿ ಇತರರು ಇದ್ದರು.

ಸಂಭ್ರಮದ ವಾಲ್ಮೀಕಿ ಜಯಂತಿ ಆಚರಣೆ

ಚಿಂತಾಮಣಿ
: ಶೋಷಣೆ ಮತ್ತು ದೌರ್ಜನಕ್ಕೆ ಒಳಗಾಗಿರುವ ಎಲ್ಲ ಸಮುದಾಯಗಳು ಆತ್ಮವಿಶ್ವಾಸದಿಂದ ಸಮಾಜದ ಮುಖ್ಯವಾಹಿನಿಗೆ ಬರ ಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಶಾಸಕ ಡಾ. ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.ನಗರದ ಮಿನಿ ವಿಧಾನಸೌಧದ ಮುಂಭಾಗ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ, `ಎಲ್ಲ ಜಾತಿ, ಧರ್ಮದವರು ಸಮಾನರು ಎಂಬ ಮನೋ ಭಾವ ಎಲ್ಲರಲ್ಲೂ ಮೂಡಬೇಕು~ ಎಂದರು.ಮಹರ್ಷಿ ವಾಲ್ಮೀಕಿ ಕುರಿತು ಶಿಕ್ಷಕ ಮಂಜುನಾಥ್ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶೇಖರ್ ಬಾಬು, ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ , ಎಪಿಎಂಸಿ ಅಧ್ಯಕ್ಷ ಮುನಿರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ, ಚೌಡರೆಡ್ಡಿ, ನಾರಾಯಣಸ್ವಾಮಿ,  ತಹಶೀಲ್ದಾರ್ ಕೃಷ್ಣಮೂರ್ತಿ, ತಾ.ಪಂ.ಇಒ ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ, ಶಾಂತಮ್ಮ, ಕೃಷ್ಣಪ್ಪ, ಮುಖಂಡರಾದ ಮುರಳಿ, ಸಾದಪ್ಪ, ನಾರಾಯಣಪ್ಪ, ಅಗ್ರಹಾರ ಮೋಹನ್, ಮಂಜುನಾಥ್, ಅಧಿಕಾರಿಗಳಾದ ಸೋಮಣ್ಣ, ಕಾಳಪ್ಪ, ನಾಗೇಂದ್ರ ಬಾಬು, ಆರ್.ನಾರಾಯಣರೆಡ್ಡಿ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry