ವಾಲ್ಮೀಕಿ ವೃತ್ತ ನಾಮಕರಣ ಬದಲಾವಣೆ ರಾಜಕೀಯ ಪ್ರೇರಿತ

7

ವಾಲ್ಮೀಕಿ ವೃತ್ತ ನಾಮಕರಣ ಬದಲಾವಣೆ ರಾಜಕೀಯ ಪ್ರೇರಿತ

Published:
Updated:

ಗುಲ್ಬರ್ಗ: ಮಹರ್ಷಿ ವಾಲ್ಮೀಕಿ ನಾಯಕ ವೃತ್ತದ ನಾಮಕರಣ ಬದಲಾವಣೆ ರಾಜಕೀಯ ಪ್ರೇರಿತ ಎಂದು ಚಿತ್ತಾಪುರ ತಾಲ್ಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಭೀಮರಾವ ದೊರೆ ಆಪಾದಿಸಿದ್ದಾರೆ.ಮಹಾನಗರ ಪಾಲಿಕೆ ಮೇಯರ್ ಬಾಬು ವಂಟಿ ಅಧ್ಯಕ್ಷತೆಯಲ್ಲಿ 2002ರಲ್ಲಿ ನಡೆದ ಸಭೆಯಲ್ಲಿ ರಾಮ ಮಂದಿರ ಬಳಿ ಇರುವ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ನಾಯಕ ನಾಮಕರಣ ಹಾಗೂ ರಾಮ ಮಂದಿರದಿಂದ ರೇಲ್ವೆ ಮೇಲ್ಸೇತುವೆ ವರೆಗಿನ ರಸ್ತೆಗೆ ಸುರಪುರದ ನಾಲ್ವಡಿ ವೆಂಕಟಪ್ಪ ನಾಯಕ ಮಾರ್ಗ ಎಂದು ನಿರ್ಣಯ ಕೈಗೊಳ್ಳಲಾಗಿತ್ತು.ಅದನ್ನು ಕೈಬಿಟ್ಟು ಮಾಜಿ ಶಾಸಕ ದಿ.ಚಂದ್ರಶೇಖರ್ ಪಾಟೀಲ್ ವೃತ್ತ ಎಂದು ನಾಮಕರಣ ಮಾಡಿರುವುದು ಸರ್ಕಾರ ಪಾಲಿಕೆ ಸದಸ್ಯರ ಕೈಗೊಂಬೆಯಾಗಿದೆ ಎಂದು ಟೀಕಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry