ಬುಧವಾರ, ಮೇ 18, 2022
28 °C

ವಾಲ್ಮೀಕಿ ಸಮಾಜ ಸುಧಾರಣೆಯ ಶಕ್ತಿ: ಮಹದೇವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ಭಾರತ ಹಾಗೂ ಪ್ರಪಂಚಕ್ಕೆ ರಾಮಾಯಣದ ದರ್ಶನ ಮಾಡಿಸಿದ ವಾಲ್ಮೀಕಿ ಮಹರ್ಷಿ ಎಂದಿಗೂ ಒಂದು ಜಾತಿಯ ವ್ಯಕ್ತಿಯಲ್ಲ. ಅವರು ಸಮಾಜ ಸುಧಾರಣೆಯ ಶಕ್ತಿ ಎಂದು ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ನಾಯಕ ಸಂಘದ ಆಶ್ರಯದಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.`ಬೇಡರಾಗಿದ್ದ ವಾಲ್ಮೀಕಿ ಬದುಕಿಗಾಗಿ ಕಳ್ಳತನ ಮಾಡಿದ್ದರು. ಆದರೆ ನಾರದ ಮುನಿಗಳ ಉಪದೇಶಕ್ಕೆ ಸಿಕ್ಕ ಅವರು ತಮಗೆ ದೊರೆತ ಅವಕಾಶವನ್ನು ಬಳಸಿಕೊಂಡು ಮಹಾಕಾವ್ಯ ಬರೆದರು. ರಾಮಾಯಣ ಕಾವ್ಯ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. ಕಾವ್ಯ ಸಂದೇಶದ ಮೂಲಕ ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದ ವಾಲ್ಮೀಕಿ ಅವರನ್ನು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡಬಾರದು~ ಎಂದು ಹೇಳಿದರು.ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ರಾಮಪ್ರಸಾದ್ ಮಾತನಾಡಿ, ವಾಲ್ಮೀಕಿಯವರ ಜೀವನ ಚರಿತ್ರೆ, ಸಾಧನೆ, ಕೊಡುಗೆ, ನಾಯಕ ಸಮಾಜದ ವೀರ ಪರಂಪರೆ, ಇತಿಹಾಸದಲ್ಲಿ ನಾಯಕ ಸಮಾಜ ಹಾಗೂ ಸಮಾಜದ ಅಭಿವೃದ್ಧಿಯ ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದರಲ್ಲದೇ, ನಾಯಕ ಸಮುದಾಯ ಸಮಾಜದಲ್ಲಿ ಇತರರಿಗೆ ಗೌರವ ನೀಡಿ, ಗೌರವ ಪಡೆಯುವುದು ಹಾಗೂ ಒಗ್ಗಟ್ಟಿನಿಂದ ಬಾಳುವುದನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.ತಹಶೀಲ್ದಾರ್ ಜವರೇಗೌಡ, ಸಿಪಿಐ ಗಜೇಂದ್ರಪ್ರಸಾದ್, ಇಓ ಡಿ.ಚಂದ್ರಶೇಖರಯ್ಯ, ಜಿ.ಪಂ ಸದಸ್ಯರಾದ ರೇಣುಕಾ ನಾಗರಾಜು, ಕೆ.ಮಹಾದೇವ್, ಎಂ.ಸುಧಾ, ಗೌರಮ್ಮ, ತಾ.ಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸಿ.ವೆಂಕಟೇಶ್, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಹೊನ್ನನಾಯಕ, ಕಾರ್ಯದರ್ಶಿ ಆಲಗೂಡು ನಾಗರಾಜು, ಪಪಂ ಅಧ್ಯಕ್ಷ ಬಸವಣ್ಣ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷರಾದ ಸಿದ್ಧಾರ್ಥ, ಕೆ.ಸಿ.ಬಲರಾಂ, ಎಂ.ಡಿ.ಬಸವರಾಜು  ಎಪಿಎಂಸಿ ಕಾರ್ಯದರ್ಶಿ ಬೋರಣ್ಣ, ಎಇಇ ಜನಾರ್ಧನ್, ಪುರುಷೋತ್ತಮ್, ಮುಖ್ಯಾಧಿಕಾರಿ ಕರಿಬಸವಯ್ಯ, ಬಿಇಓ ಜಿ.ಎ.ಲೋಕೇಶ್, ಸಂಪತ್ ದೊರೆರಾಜ್, ಚಾಲಚಂದ್ರ, ಬಿ.ಮರಯ್ಯ, ರೇಣುಕಾ ರಾಮು, ಎ.ಜೆ.ವೆಂಕಟೇಶ್, ಸೋಸಲೆ ಶಿವಸ್ವಾಮಿ, ಕರಿಯಪ್ಪ, ಅಣ್ಣಯ್ಯಸ್ವಾಮಿ, ಎಂ.ಪಿ.ಮರಿಸ್ವಾಮಿ, ಹುಣಸೂರು ಬಸವಣ್ಣ, ಡಣಾಯಕನಪುರ ಸೋಮಣ್ಣ, ಜಯಣ್ಣ, ಸುಬ್ಬನಾಯಕ ಮತ್ತಿತರರು ಹಾಜರಿದ್ದರು.ಮೆರವಣಿಗೆ: ಇದಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಮೆರವಣಿಗೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಂದಿಕಂಬಕ್ಕೆ ಪೂಜೆ ಸಲ್ಲಿಸುವ  ಮೂಲಕ ಚಾಲನೆ ನೀಡಿದರು.ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಾಂಪ್ರದಾಯಿಕವಾಗಿ ನಂದಿಕಂಬ ಹಾಗೂ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭಗೊಂಡಿತು. ನಂತರ ವಿಶ್ವಕರ್ಮ ರಸ್ತೆ, ಲಿಂಕ್ ರಸ್ತೆ , ಕಾಲೇಜು ರಸ್ತೆ ಮಾರ್ಗವಾಗಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮೆರವಣಿಗೆ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಮೂಗೂರುನಿಂದ ವಾಲ್ಮೀಕಿ ಭಾವಚಿತ್ರ ಹೊತ್ತ ಪಲ್ಲಕ್ಕಿ, ವಾಲ್ಮೀಕಿ ವೇಷಧಾರಿಗಳನ್ನೊಳಗೊಂಡ ಸ್ತಬ್ಧ ಚಿತ್ರ, ಪೂಜಾ ಕುಣಿತ, ಸೋಬಾನೆ ಪದ, ಆಲಗೂಡು, ಕೆಂಡನಕೊಪ್ಪಲು, ಆರ್.ಪಿ.ಹುಂಡಿ, ಕಲಿಯೂರು ನಿಲಸೋಗೆ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದ ಕಲಾವಿದರ ಕೋಲಾಟ, ದೊಣ್ಣೆ ವರಸೆ, ಪೂಜಾ ಕುಣಿತ ಕಲಾ ತಂಡಗಳು ಮಾರ್ಗದುದ್ದಕ್ಕೂ ಪ್ರದರ್ಶನ ನೀಡಿ ಆಕರ್ಷಿಸಿದವು. ಯುವಕರು ದೊಣ್ಣೆ ವರಸೆ ಹಾಗೂ ಕೋಲಾಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.