`ವಾಲ್‌ಮಾರ್ಟ್ ಕಾಯ್ದೆ ಉಲ್ಲಂಘಿಸಿಲ್ಲ'

7

`ವಾಲ್‌ಮಾರ್ಟ್ ಕಾಯ್ದೆ ಉಲ್ಲಂಘಿಸಿಲ್ಲ'

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತದ ಚಿಲ್ಲರೆ ವಹಿವಾಟು ಕ್ಷೇತ್ರ ಪ್ರವೇಶಿಸಲು ಮಾಡಿದ ಲಾಬಿಗೆ ರೂ. 125 ಕೋಟಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿರುವ `ವಾಲ್‌ಮಾರ್ಟ್' ಸಂಸ್ಥೆ ತಮ್ಮ ದೇಶದ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.ಈ ಸಂಬಂಧ ಭಾರತೀಯ ವಿರೋಧ ಪಕ್ಷಗಳು ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರೆ ವಿಕ್ಟೋರಿಯಾ ನುಲಂದ್ `ಅಮೆರಿಕದ ಕಡೆಯಿಂದ ಹೇಳುವುದಾದಲ್ಲಿ ಈ ಸಂಬಂಧ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ' ಎಂದಿದ್ದಾರೆ. ಭಾರತದ ಚಿಲ್ಲರೆ ಮಾರಾಟ ಕ್ಷೇತ್ರ ಪ್ರವೇಶಿಸಲು ಭಾರಿ ಮೊತ್ತ ವ್ಯಯ ಮಾಡಿರುವ ಕುರಿತು ವಾಲ್‌ಮಾರ್ಟ್ ಅಮೆರಿಕದ ಸೆನೆಟ್‌ಗೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ಸ್ವತಂತ್ರ ತನಿಖೆ ಕೈಗೊಳ್ಳಲು ವಿರೋಧ ಪಕ್ಷಗಳು ಸೋಮವಾರ ರಾಜ್ಯಸಭೆಯಲ್ಲಿ ಒತ್ತಾಯ ಮಾಡಿದ್ದರ ಹಿನ್ನೆಲೆಯಲ್ಲಿ ನುಲಂದ್ ಈ ಹೇಳಿಕೆ ನೀಡಿದ್ದಾರೆ.` ವಾಲ್‌ಮಾರ್ಟ್ ಲಾಬಿ ನಡೆಸಿರುವುದಾಗಿ ಬಂದಿರುವ ಪತ್ರಿಕಾ ವರದಿಗಳನ್ನು ತಾವು ಗಮನಿಸಿದ್ದು, ಅಮೆರಿಕದ ಕಂಪೆನಿ ಲಾಬಿ ಕಾನೂನು 1995 ಹಾಗೂ ಪ್ರಾಮಾಣಿಕ ನಾಯಕತ್ವ, ಮುಕ್ತ ಸರ್ಕಾರ ಒದಗಿಸುವ ಕಾನೂನು 2007 ರ ಅನ್ವಯ ಯಾವುದೇ ರೀತಿಯ ಲಾಬಿ ಮಾಡಬಯಸುವ ಸಂಸ್ಥೆಗಳು ಇಲ್ಲವೆ ಸಂಘಟನೆ ತಮ್ಮ ಚಟುವಟಿಕೆ ಕುರಿತು ಸೆನೆಟ್‌ಗೆ ವರದಿ ಸಲ್ಲಿಸಬೇಕಾಗುತ್ತದೆ. ಹಾಗಾಗಿ ವಾಲ್‌ಮಾರ್ಟ್ ಸೆನೆಟ್‌ನಲ್ಲಿ ಲಾಬಿ ನಡೆಸಿದೆ ಎಂಬ ಆರೋಪಗಳು ಸರಿಯಲ್ಲ' ಎಂದರು.`ಅಮೆರಿಕದ ಕಾನೂನು ಅನ್ವಯ ವಾಲ್‌ಮಾರ್ಟ್ ಕುರಿತು ಪ್ರಕಟವಾಗಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ವೆಚ್ಚಗಳ ಕುರಿತು ಪ್ರತಿ ಅಮೆರಿಕದ ಕಂಪೆನಿ ಕಾಲಕಾಲಕ್ಕೆ ವಿವರ ನೀಡಬೇಕಾಗಿರುವುದರಿಂದ ಲಾಬಿಗೆ ಅವಕಾಶ ಇಲ್ಲ. ವಿಶ್ವದ ಎಲ್ಲೆಡೆ ವ್ಯಾಪಾರದ ವಿಸ್ತಾರ ಹಾಗೂ ಹೂಡಿಕೆ ಕುರಿತಾಗಿ ಈಗಾಗಲೇ ಅಮೆರಿಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.'`ಇದೆಲ್ಲವೂ ದೇಶದ ಕಾನೂನುಗಳಿಗೆ ಅನುಗುಣವಾಗಿ ನಡೆದಿದೆ' ಎಂದು ವಾಲ್‌ಮಾರ್ಟ್ ಕಂಪೆನಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry