ವಾಲ್‌ಮಾರ್ಟ್ ಲಾಬಿ : ನ್ಯಾಯಾಂಗ ತನಿಖೆಗೆ

5
ಪ್ರತಿಪಕ್ಷಗಳ ಪಟ್ಟಿಗೆ ಮಣಿದ ಕೇಂದ್ರ ಸರ್ಕಾರ

ವಾಲ್‌ಮಾರ್ಟ್ ಲಾಬಿ : ನ್ಯಾಯಾಂಗ ತನಿಖೆಗೆ

Published:
Updated:

ನವದೆಹಲಿ (ಪಿಟಿಐ) : ವಾಲ್‌ಮಾರ್ಟ್ ಲಾಬಿ ವಿಷಯವನ್ನು ತನಿಖೆಗೆ ಒಳಪಡಿಸಬೇಕೆಂಬ ಪ್ರತಿಪಕ್ಷಗಳ ಒತ್ತಡಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ನಿಗದಿತ ಅವಧಿಯಲ್ಲಿ ತನಿಖೆ ನಡೆಸುವುದಾಗಿ ಬುಧವಾರ ಇಲ್ಲಿ ತಿಳಿಸಿದೆ.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಅವರು ವಾಲ್‌ಮಾರ್ಟ್ ಲಾಬಿ ಪ್ರಕರಣದ ಕುರಿತಾದ ಮಾಧ್ಯಮ ವರದಿ ಬಗ್ಗೆ ತನಿಖೆ ನಡೆಸಲು ಸರ್ಕಾರವು ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಿದೆ ಎಂದು ಸದನದಲ್ಲಿ ತಿಳಿಸಿದರು.ಭಾರತದ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಲು  ಲಾಬಿ ನಡೆಸಿರುವ ಬಗ್ಗೆ ವಾಲ್ ಮಾರ್ಟ್ ಅಮೆರಿಕದ ಸೆನೆಟ್ ಗೆ ಸಲ್ಲಿಸಿರುವ ವರದಿ ಕಳೆದೆರಡು ದಿನಗಳಿಂದ ಸಂಸತ್‌ನಲ್ಲಿ ಕೋಲಾಹಲ ಸೃಷ್ಟಿಸಿತ್ತು. ನಿಗದಿತ ಅವಧಿಯಲ್ಲಿ ಪ್ರಕರಣದ ತನಿಖೆ ನಡೆಸಲು ಸಂಸದೀಯ ಸಮಿತಿ ಇಲ್ಲವೇ ನ್ಯಾಯಾಂಗ ಸಮಿತಿಗೆ ಒಪ್ಪಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry