ಭಾನುವಾರ, ಏಪ್ರಿಲ್ 18, 2021
32 °C

ವಾಲ್ ಮಾರ್ಟ್‌ನಲ್ಲಿ ಕರಾಳ ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಎಎಫ್‌ಪಿ): ಕಡಿಮೆ ವೇತನ ಮತ್ತು ಕಾರ್ಮಿಕ ಸ್ನೇಹಿ ವಾತಾವರಣ ಇಲ್ಲದಿರುವುದನ್ನು ಖಂಡಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ವಿಶ್ವದ ಚಿಲ್ಲರೆ ವಹಿವಾಟು ಉದ್ಯಮದ ದಿಗ್ಗಜ ವಾಲ್‌ಮಾರ್ಟ್ ಸಿಬ್ಬಂದಿ ಮುಂದಿನ ವಾರ `ಕರಾಳ ಶುಕ್ರವಾರ~ ಆಚರಿಸಲು ಸಿದ್ಧತೆ ನಡೆಸಿದ್ದಾರೆ.ಅತಿ ಹೆಚ್ಚು ವಹಿವಾಟು ನಡೆಯುವ ದಿನವಾದ ಶುಕ್ರವಾರವೇ ಈ ಪ್ರತಿಭಟನೆ ನಡೆಸಲು ಸಿಬ್ಬಂದಿ ಮುಂದಾಗಿದ್ದಾರೆ.ಹೆಚ್ಚಿನ ವೇತನ ಮತ್ತು ಉತ್ತಮ ಮೂಲ ಸೌಕರ್ಯಗಳನ್ನು ನೀಡುವಂತೆ ಆಗ್ರಹಿಸುತ್ತಿರುವ ನೌಕರರ ಬಾಯಿ ಮುಚ್ಚಿಸುವ ಆಡಳಿತ ಮಂಡಳಿಯ ಯತ್ನವನ್ನು ಪ್ರತಿಭಟಿಸಿ ನೌಕರರು ಬುಧವಾರದಿಂದಲೇ ಕರ್ತವ್ಯಕ್ಕೆ ಗೈರುಹಾಜರಾಗುತ್ತಿದ್ದಾರೆ ಎಂದು ಕಾರ್ಮಿಕರ ಸಮೂಹವೊಂದು ಹೇಳಿದೆ.ನ.23ರ ಶುಕ್ರವಾರ ನಡೆಯಲಿರುವ ಪ್ರತಿಭಟನೆಯಿಂದಾಗಿ ಅಮೆರಿಕದಾದ್ಯಂತ ವಾಲ್‌ಮಾರ್ಟ್‌ನ 1000 ಮಳಿಗೆಗಳ ವಹಿವಾಟಿಗೆ ಧಕ್ಕೆಯಾಗಲಿದೆ ಎಂದು ಆರ್ಗನೈಷೇಶನ್ ಯುನೈಟೆಡ್ ಫಾರ್ ರೆಸ್ಪೆಕ್ಟ್ ಅಟ್ ವಾಲ್‌ಮಾರ್ಟ್ (ಅವರ್ ವಾಲ್‌ಮಾರ್ಟ್) ಹೇಳಿಕೆಯಲ್ಲಿ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.