ಶುಕ್ರವಾರ, ಜನವರಿ 24, 2020
17 °C

ವಾಲ್ ಸ್ಟ್ರೀಟ್ ಡಿಜಿಟಲ್ ನೆಟ್‌ವರ್ಕ್; ರಾಜು ನರಿಸೆಟ್ಟಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): `ದಿ ವಾಲ್ ಸ್ಟ್ರೀಟ್ ಜರ್ನಲ್~ ದಿನಪತ್ರಿಕೆಗೆ ಸೇರಿದ ಡಿಜಿಟಲ್ ನೆಟ್‌ವರ್ಕ್‌ನ ವ್ಯವಸ್ಥಾಪಕ ಸಂಪಾದಕರಾಗಿ ಭಾರತೀಯ ಮೂಲದ ರಾಜು ನರಿಸೆಟ್ಟಿ ನೇಮಕಗೊಂಡಿದ್ದಾರೆ.ಸದ್ಯ ನರಿಸೆಟ್ಟಿ ಅವರು `ವಾಷಿಂಗ್ಟನ್ ಪೋಸ್ಟ್~ನ ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪೆನಿಯ ಡಿಜಿಟಲ್ ಮತ್ತು ನೀತಿ ನಿರೂಪಣಾ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.1994ರಲ್ಲಿ ಅವರು `ದಿ ವಾಲ್ ಸ್ಟ್ರೀಟ್ ಜರ್ನಲ್~ನ ಪಿಟ್ಸ್‌ಬರ್ಗ್ ವರದಿಗಾರರಾಗಿ ಮತ್ತು 2006ರಲ್ಲಿ ಅದರ ಯೂರೋಪ್ ಆವೃತ್ತಿಯ ಸಂಪಾದಕರಾಗಿ ಕೆಲಸ ಮಾಡಿದ್ದರು. ಇದೀಗ ಅವರು ಮತ್ತೆ ಇದೇ ಕಂಪೆನಿಗೆ ಮರಳುತ್ತಿದ್ದಾರೆ.ಜರ್ನಲ್‌ನ ಆನ್‌ಲೈನ್ ಘಟಕಗಳಾದ ಸ್ಮಾರ್ಟ್‌ಮನಿ ಡಾಟ್ ಕಾಮ್, ಡಬ್ಲ್ಯೂಎಸ್‌ಜೆ ಡಾಟ್ ಕಾಮ್ ಮತ್ತು ಅದರ ಚೀನಾ, ಜಪಾನ್, ಜರ್ಮನಿ ಆವೃತ್ತಿಗಳ ಮೇಲ್ವಿಚಾರಣೆಯನ್ನು ನರಿಸೆಟ್ಟಿ ಮಾಡುವರು. ಇದಲ್ಲದೇ ಅವರು ಜರ್ನಲ್‌ನ ಉಪ ವ್ಯವಸ್ಥಾಪಕ ಸಂಪಾದಕರಾಗಿಯೂ ಕಾರ್ಯ  ನಿರ್ವಹಿಸುವರು. 

ಪ್ರತಿಕ್ರಿಯಿಸಿ (+)