ವಾಷಿಂಗ್‌ ಮಷಿನ್‌ನಲ್ಲಿ ಪ್ರಿಯಕರ!

7

ವಾಷಿಂಗ್‌ ಮಷಿನ್‌ನಲ್ಲಿ ಪ್ರಿಯಕರ!

Published:
Updated:

ಮೆಲ್ಬರ್ನ್‌ (ಪಿಟಿಐ): ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಅಚ್ಚರಿ­ಗೊಳಿಸುವ ಭರದಲ್ಲಿ ನಗ್ನಾವಸ್ಥೆಯಲ್ಲಿ ವಾಷಿಂಗ್‌ ಮಷಿನ್‌ನೊಳಗೆ ಸಿಲುಕಿ ಪರದಾಡಿದ ಅಪರೂಪದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.‘ಪ್ರೇಯಸಿಯನ್ನು ಅಚ್ಚರಿಗೊಳಿಸಲು ಹೋಗಿ ವಾಷಿಂಗ್‌ ಮಷಿನ್‌ನಲ್ಲಿ ಅವಿತುಕೊಂಡ. ಆದರೆ ಹೊರ ಬರಲಾರದೆ ಪರದಾಡಿದ. ಅವನನ್ನು ಹೊರಕ್ಕೆ ಎಳೆಯಲು 20 ನಿಮಿಷ ತಗುಲಿತು’ ಎಂದು ಪೊಲೀಸ್‌ ಅಧಿಕಾರಿ ಟಿಮ್‌ ಗ್ಲೀಸನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry