ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿದ ಬಾಲಕಿ

7

ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿದ ಬಾಲಕಿ

Published:
Updated:

ನ್ಯೂಯಾರ್ಕ್‌ (ಪಿಟಿಐ): ಮಕ್ಕಳು ಮೋಜಿಗೆಂದು ಆಡುತ್ತಿದ್ದ ಕಳ್ಳ ಪೊಲೀಸ್‌ ಆಟವು ದುರಂತದಲ್ಲಿ ಕೊನೆಗೊಂಡಿದ್ದು, 11 ವರ್ಷದ ಬಾಲಕಿಯೊಬ್ಬಳು 90 ನಿಮಿಷಗಳ ಕಾಲ ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿಕೊಂಡ ಘಟನೆ ಇಲ್ಲಿ ನಡೆದಿದೆ.ಸಾಲ್ಟ್‌ ಲೇಕ್‌ನ ಉತಾಹ್‌ ನಗರದ ತನ್ನ ಮನೆಯಲ್ಲಿ ಬಾಲಕಿಯೊಬ್ಬಳು ಸಹೋದರಿ­­ಯರೊಂದಿಗೆ ಆಡುತ್ತಿದ್ದಾಗ ವಾಷಿಂಗ್‌ ಮಷಿನ್‌ನ ಒಳಗಡೆ ಅಡಗಿಕೊಳ್ಳಲು ಯತ್ನಿಸಿದಾಗ ಅಲ್ಲಿಯೇ ಸಿಲುಕಿಕೊಂಡಿದ್ದಾಳೆ. ಮನೆ­ಯ­ವರು ಬಿಡಿಸಲು ಯತ್ನಿಸಿದರೂ ಸಾಧ್ಯ­ವಾಗದೇ ಕೊನೆಗೆ ತುರ್ತು ಸೇವಾ ಸಿಬ್ಬಂದಿ ಅವಳನ್ನು ಹೊರತೆಗೆ­ದಿ­ದ್ದಾರೆ ಎಂದು ‘ನ್ಯೂಯಾರ್ಕ್‌ ಡೇಲಿ ನ್ಯೂಸ್‌’ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry