ವಾಸನ್ ಸಮೂಹ ಹೆಲ್ತ್‌ಕೇರ್ ಸಂಸ್ಥೆಯಿಂದ ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ

7

ವಾಸನ್ ಸಮೂಹ ಹೆಲ್ತ್‌ಕೇರ್ ಸಂಸ್ಥೆಯಿಂದ ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ

Published:
Updated:

ಬೆಂಗಳೂರು: ನೇತ್ರ ಚಿಕಿತ್ಸೆಯಲ್ಲಿ ನಿರತವಾಗಿರುವ ವಾಸನ್ ಸಮೂಹ ಹೆಲ್ತ್ ಕೇರ್ ಸಂಸ್ಥೆಯು, ನಗರದಾದ್ಯಂತ ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಬಿಸಿದೆ. ಎರಡು ಆಸ್ಪತ್ರೆಗಳು ನೇತ್ರ ಚಿಕಿತ್ಸೆಗೆ ಸಂಬಂಧಪಟ್ಟರೆ, ಇನ್ನೆರಡು ದಂತ ಚಿಕಿತ್ಸೆ ನೀಡುತ್ತದೆ.ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಈಚೆಗೆ ಆಸ್ಪತ್ರೆಗಳನ್ನು ಉದ್ಘಾಟಿಸಿದರು. ಶಾಸಕ ಬಿ.ಎನ್. ವಿಜಯಕುಮಾರ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಇತರರು ಭಾಗವಹಿಸಿ, ಶುಭ ಕೋರಿದರು.ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ದ್ವಾರಕನಾಥನ್,  `ಆರೋಗ್ಯ ಸಂರಕ್ಷಣೆಯು ಅತಿ ಪ್ರಮುಖ ಗುರಿಯಾಗಿದ್ದು, ವಾಸನ್ ಸಂಸ್ಥೆಯು ಆರೋಗ್ಯದ ವಿವಿಧ ಮಜಲುಗಳಲ್ಲಿ ಜನರಿಗೆ ಸೇವೆ ನೀಡಲು ಬದ್ಧವಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆಸ್ಪತ್ರೆಗಳು ಕಾರ್ಯನಿರ್ವಹಿಸಲಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry