ವಾಸವಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ: ನಾಲ್ಕನೇ ಶಾಖೆ ಉದ್ಘಾಟನೆ

ಶನಿವಾರ, ಜೂಲೈ 20, 2019
23 °C

ವಾಸವಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ: ನಾಲ್ಕನೇ ಶಾಖೆ ಉದ್ಘಾಟನೆ

Published:
Updated:

ಬೆಂಗಳೂರು: ನಗರದ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ನೂತನವಾಗಿ ಆರಂಭಿಸಿರುವ ನಾಲ್ಕನೇ ಶಾಖೆಯನ್ನು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಭಾನುವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, `ಬಸವನಗುಡಿಯ ಗಾಂಧಿ ಬಜಾರ್ ಐತಿಹಾಸಿಕ ಮಹತ್ವ ಮಾತ್ರವಲ್ಲ, ಸಾಂಸ್ಕೃತಿಕ ವೈಭವವನ್ನು ಕಾಯ್ದುಕೊಂಡಿರುವ ಪ್ರಮುಖ ಪ್ರದೇಶ. ಈ ಭಾಗದಲ್ಲಿ ನೂತನ ಶಾಖೆ ಆರಂಭಿಸಿರುವುದು ಉತ್ತಮವಾಗಿದೆ~ ಎಂದರು.`ಹಣಕಾಸು ವ್ಯವಹಾರವನ್ನು ಲಾಭದಾಯಕವಾಗಿ ನಡೆಸುವುದು ಸಾಮಾನ್ಯ ವಿಷಯವಲ್ಲ. ಕೆಲ ಸಹಕಾರಿ ಸೊಸೈಟಿಗಳಲ್ಲಿನ ಅವ್ಯವಹಾರದಿಂದ ಈ ಕ್ಷೇತ್ರದ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ. ಹಾಗಿದ್ದರೂ ವಾಸವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಉತ್ತಮ ಸೇವೆ ಸಲ್ಲಿಸುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಸೊಸೈಟಿಯು ಈ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ. ಹೆಚ್ಚಿನ ವ್ಯವಹಾರ ನಡೆಸಿ ಆರ್ಥಿಕವಾಗಿ ಸದೃಢವಾಗಲಿ. ಸ್ಥಳೀಯರ ಆಶೋತ್ತರಗಳಿಗೆ ಸ್ಪಂದಿಸಲಿ~ ಎಂದು ಹೇಳಿದರು.

ಲೆಕ್ಕ ಪರಿಶೋಧಕ ಐ.ಎಸ್. ಪ್ರಸಾದ್ ಮಾತನಾಡಿ, `ಆರ್ಥಿಕ ಶಿಸ್ತನ್ನು ರೂಢಿಸಿಕೊಂಡಿರುವ ಸೊಸೈಟಿಯು ಇನ್ನಷ್ಟು ಪ್ರಗತಿ ಸಾಧಿಸಲಿ. ಸಂಸ್ಥೆಯ ಸದಸ್ಯರಿಗೆ ಸೂಕ್ತ ಸಾಲ- ಸೌಲಭ್ಯ ಕಲ್ಪಿಸಲಿ. ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗಲಿ~ ಎಂದರು.ಇದೇ ಸಂದರ್ಭದಲ್ಲಿ ಭಾರಿ ಮೊತ್ತದ ಠೇವಣಿ ಹೂಡಿದವರನ್ನು ಅಭಿನಂದಿಸಲಾಯಿತು. ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎ. ಶರವಣ, ಪಾಲಿಕೆ ಸದಸ್ಯ ಅನಿಲ್‌ಕುಮಾರ್, ಸೊಸೈಟಿಯ ಅಧ್ಯಕ್ಷ ಆರ್.ಪಿ. ರವಿಶಂಕರ್ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry