ಗುರುವಾರ , ಫೆಬ್ರವರಿ 25, 2021
30 °C

ವಾಸವಿ ಟ್ರಸ್ಟ್ 60ರ ಸಂಭ್ರಮ: ಹೊಸ ವಿದ್ಯಾರ್ಥಿನಿಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಸವಿ ಟ್ರಸ್ಟ್ 60ರ ಸಂಭ್ರಮ: ಹೊಸ ವಿದ್ಯಾರ್ಥಿನಿಲಯ

ಬೆಂಗಳೂರು:  ‘ವಾಸವಿ ವಿದ್ಯಾರ್ಥಿ­ನಿಲಯ ಟ್ರಸ್ಟ್‌ಗೆ 60 ವರ್ಷ ತುಂಬಿದ ಸಂಭ್ರ­ಮದಲ್ಲಿ ವಿ.ವಿಪುರದಲ್ಲಿ ನೂತನ ವಿದ್ಯಾರ್ಥಿನಿಲಯವನ್ನು ನಿರ್ಮಿಸಲಾ­ಗುವುದು’ ಎಂದು ವಾಸವಿ ವಿದ್ಯಾರ್ಥಿ­ನಿಲಯ ಟ್ರಸ್ಟ್‌ನ ಅಧ್ಯಕ್ಷ ಧರ್ಮಪ್ರಕಾಶ ಮಾನಂದಿ ನಂಜುಂಡ ಶೆಟ್ಟಿ ಹೇಳಿದರು.

ವಾಸವಿ ವಿದ್ಯಾರ್ಥಿನಿಲಯ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಸುವರ್ಣ ಮಹೋ­ತ್ಸವ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಟ್ರಸ್ಟ್‌ನ ನಿಧಿಗೆ ರೂ. 1.2 ಕೋಟಿ ಮೊತ್ತದ ದೇಣಿಗೆ ನೀಡಿದ ಅವರು, ‘ಪ್ರಸ್ತುತ ವಿದ್ಯಾರ್ಥಿನಿಲಯದಲ್ಲಿ 48 ವಿದ್ಯಾರ್ಥಿಗಳಿಗೆ ಅವಕಾಶವಿದೆ. ನೂತನ ವಿದ್ಯಾರ್ಥಿನಿಲಯದಲ್ಲಿ 110 ವಿದ್ಯಾರ್ಥಿಗಳಿಗೆ  ಅವಕಾಶವಿರಲಿದೆ. ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾ­ತ್ಮಕ ಪರೀಕ್ಷೆಗಳನ್ನು ತೆಗೆದು­ಕೊಂಡಿ­ರುವ 20 ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ ಮತ್ತು ತರಬೇತಿ­ಆರಂಭಿಸಲಾಗುವುದು’ ಎಂದರು.ಟ್ರಸ್ಟ್‌ನ ಕಾರ್ಯದರ್ಶಿ ಸಿ.ಜಯ­ಚಂದ್ರ ಶೆಟ್ಟಿ ಮಾತನಾಡಿ, ‘ರೂ. 12 ಕೋಟಿ ವೆಚ್ಚದಲ್ಲಿ ಹೊಸ ವಿದ್ಯಾರ್ಥಿ­ನಿಲಯ ನಿರ್ಮಿಸಲಾಗುತ್ತಿದೆ. 43 ಮಂದಿ ಟ್ರಸ್ಟಿಗಳು ತಲಾ ರೂ. 20 ಲಕ್ಷ ದೇಣಿಗೆ ನೀಡಿದ್ದಾರೆ’ ಎಂದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಕೆ.­ಪಾಂಡುರಂಗ ಶೆಟ್ಟಿ, ಕರ್ನಾಟಕ ಆರ್ಯ ವೈಶ್ಯ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಪದ್ಮಶ್ರೀ ಡಾ.ಬಿ.ಎಲ್.­ಎಸ್.ಮೂರ್ತಿ ಅವರನ್ನು ರಾಮಕೃಷ್ಣ – ವಿವೇಕಾನಂದ ಆಶ್ರಮದ ವಿವೇಕಾನಂದ ಸರಸ್ವತಿ ಮಹಾರಾಜ್ ಸನ್ಮಾನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.