ಗುರುವಾರ , ಜನವರಿ 23, 2020
28 °C

ವಾಸ್ತು ವಿನ್ಯಾಸದಿಂದ ಒಡವೆಯ ಗೊಡವೆಗೆ...

ಸುಮಲತಾ ಎನ್‌. Updated:

ಅಕ್ಷರ ಗಾತ್ರ : | |

ವಾಸ್ತು ವಿನ್ಯಾಸದಿಂದ ಒಡವೆಯ ಗೊಡವೆಗೆ...

ಬೇಕೆಂದಾಗ ಆಭರಣಗಳನ್ನು ಖರೀದಿಸಲು ಸಾಕಷ್ಟು ಆಯ್ಕೆಗಳಿವೆ. ಆದರೆ ನಮ್ಮ ಅಭಿರುಚಿ, ವ್ಯಕ್ತಿತ್ವಕ್ಕೆ ಹೊಂದುವಂಥ ಆಭರಣಗಳನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನಗರದ ‘ಲೈಫ್ ಡಿಸೈನ್‌ ಸ್ಟುಡಿಯೊ’ ನೀಡಲಿದೆ. ಇಂಥ ನೂತನ ಪರಿಕಲ್ಪನೆಯ ಹಿಂದಿರುವುದು ಆಭರಣ ವಿನ್ಯಾಸಕಿ ಹಾಗೂ ಮುಖ್ಯ ನಿರ್ವಹಣಾ ಅಧಿಕಾರಿ ದೀಪ್ತಿ ಸಾತೆ. ಚಿನ್ನ ಹಾಗೂ ವಜ್ರದಲ್ಲಿ ಸಮಕಾಲೀನ ವಿನ್ಯಾಸ ಮೂಡಿಸಿರುವುದು ಇವರ ವಿಶೇಷತೆ. ನಗರಿಗರ ಆಭರಣ ಪ್ರೇಮ, ಆಭರಣ ವಿನ್ಯಾಸದಲ್ಲಿನ ಹಲವು ಮಜಲುಗಳ ಬಗ್ಗೆ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.ಆಭರಣ ವಿನ್ಯಾಸದಲ್ಲಿ ಆಸಕ್ತಿ ಮೂಡಿದ್ದು ಹೇಗೆ?

ನಾನು ವಾಸ್ತು ವಿನ್ಯಾಸಕಿಯಾಗಿದ್ದೆ. ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲಿ 18 ವರ್ಷಗಳ ಅನುಭವವಿದೆ. ಅದೇ ನನಗೆ ಆಭರಣ ವಿನ್ಯಾಸದಲ್ಲಿ ತೊಡಗಿಕೊಳ್ಳಲು ಪ್ರೇರಣೆ. ಆಭರಣಗಳ  ಮೋಹವಿಲ್ಲದವರೂ ತಮ್ಮ ವ್ಯಕ್ತಿತ್ವಕ್ಕೆ ಹೊಂದುವಂಥ ಒಡವೆ ತೊಡಲು ಇಚ್ಛಿಸುತ್ತಾರೆ. ಅಂಥವರ ಆದ್ಯತೆ ವಿನ್ಯಾಸ ಕ್ಷೇತ್ರಕ್ಕೆ ಬೇರೆ ರೂಪು ನೀಡಿದೆ.ನಿಮ್ಮ ಬ್ರಾಂಡ್‌ಗೆ ಗ್ರಾಹಕರ ಪ್ರತಿಕ್ರಿಯೆ ಹೇಗಿದೆ?

ನಮ್ಮ ‘ಲೈಫ್’ ಬ್ರಾಂಡ್ ತುಂಬಾ ಚೆನ್ನಾಗಿದೆ, ಈ ವಿನ್ಯಾಸಗಳು ಅನನ್ಯ ಎಂದು ಮೆಚ್ಚಿಕೊಳ್ಳುತ್ತಾರೆ. ಈ ಸ್ಟುಡಿಯೊ ವಿನ್ಯಾಸ, ವಾತಾವರಣವೂ  ಇಷ್ಟವಾಗಿದೆ. ವಿನ್ಯಾಸ ಕೌಶಲದೊಂದಿಗೆ ಗ್ರಾಹಕರ ತೃಪ್ತಿಯೂ ನಮಗೆ ಮುಖ್ಯ.ಇದುವರೆಗೂ ಎಷ್ಟು ಪ್ರದರ್ಶನ ನೀಡಿದ್ದೀರಿ?

ಕಳೆದ ಎರಡೂವರೆ ವರ್ಷಗಳಿಂದ 15ರಿಂದ 18 ಪ್ರದರ್ಶನ ನೀಡಿದ್ದೇವೆ. ಆಭರಣ ಮಾರುಕಟ್ಟೆಗೆ ಬೇಡಿಕೆ ಹೇಗಿದೆ ಎಂಬುದನ್ನು ತಿಳಿಯುವುದು ಇದರ ಹಿಂದಿನ ಉದ್ದೇಶ. ಮುಂಬೈನಲ್ಲಿ ನಮ್ಮ ಬ್ರಾಂಡ್‌ಗೆ ಬೇಡಿಕೆ ಹೆಚ್ಚಿದೆ. ಇದೀಗ ಬೆಂಗಳೂರಿಗೆ ಬಂದಿದ್ದೇವೆ. ಪ್ರತಿಕ್ರಿಯೆ ಸ್ವಲ್ಪ ದಿನಗಳಲ್ಲಿಯೇ ತಿಳಿಯಬಹುದು.ಪ್ರಸ್ತುತ ಚಿನ್ನದ ಬೆಲೆ ಏರಿದೆ. ಇದರಿಂದ ಜನರ ಆದ್ಯತೆ ಬದಲಾಗಿದೆಯಲ್ಲವೇ?

ಚಿನ್ನ, ವಜ್ರದ ಸ್ಥಾನವನ್ನು ಇನ್ನಾವುದೇ ಆಭರಣ ತುಂಬಲು ಸಾಧ್ಯವಿಲ್ಲ. ಚಿನ್ನಕ್ಕಿಂತ ಪ್ಲಾಟಿನಂ ಬಳಕೆ ಈಗೀಗ ಹೆಚ್ಚುತ್ತಿದೆ ಎನ್ನಬಹುದು. ಅಂದರೆ 18 ಕ್ಯಾರೆಟ್‌ ಚಿನ್ನಕ್ಕಿಂತ ಪ್ಲಾಟಿನಂ ಬಳಕೆ ಹೆಚ್ಚುತ್ತಿದೆ. ಏಕೆಂದರೆ ಎರಡರ ಬೆಲೆಯಲ್ಲೂ ಅಷ್ಟೇನೂ ವ್ಯತ್ಯಾಸವಿಲ್ಲದ ಕಾರಣ ಪ್ಲಾಟಿನಂಗೆ ಗ್ರಾಹಕರು ಹೆಚ್ಚಿದ್ದಾರೆ.ನಿಮ್ಮ ವಿನ್ಯಾಸದ ಪ್ರಮುಖ ಆಕರ್ಷಣೆ?

ಪ್ರಾಚೀನ ಶೈಲಿಯೊಂದಿಗೆ ಸಮಕಾಲೀನತೆಯನ್ನು ಒಗ್ಗಿಸಿಕೊಂಡು ಕೆಲವು ಸಂಗ್ರಹಗಳನ್ನು ಪರಿಚಯಿಸಿರುವುದು ವಿಶೇಷ. ಕಾಕ್‌ಟೇಲ್‌ ರಿಂಗ್‌, ಕಫ್‌ ಬ್ರೇಸ್ಲೆಟ್, ನೆಕ್ಲೇಸ್, ಕಿವಿಯೋಲೆ, ಉಂಗುರ... ಹೇಳುತ್ತಾ ಹೋದರೆ ಸಾಕಷ್ಟಿದೆ. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಆಭರಣಗಳನ್ನು ವಿನ್ಯಾಸ ಮಾಡಿ ಕೊಡುತ್ತೇವೆ. ಇದಕ್ಕೆಂದು ತಂಡವಿದ್ದು, ‘ಬ್ರೇನ್ ಸ್ಟಾರ್ಮಿಂಗ್ ಸೆಶನ್ ಕೂಡ ಇರುತ್ತದೆ. ನಮ್ಮದು ಸಮಕಾಲೀನ ಆಭರಣ ಬ್ರಾಂಡ್‌. ವ್ಯಕ್ತಿಗತ ಅಭಿರುಚಿಗೆ ಸಂಬಂಧಿಸಿದ್ದು. ಅಂತರರಾಷ್ಟ್ರೀಯ ಪರಿಕಲ್ಪನೆಗಳನ್ನು ಒಡವೆಗಳಲ್ಲಿ ಮೂಡಿಸುವುದೇ ನಮ್ಮ ಉದ್ದೇಶ.

ವಿನ್ಯಾಸ ಕ್ಷೇತ್ರದಲ್ಲಿನ ಬದಲಾವಣೆಗೆ ಪ್ರತಿಕ್ರಿಯಿಸುವ ಪರಿ ಹೇಗೆ?

ಬದಲಾವಣೆ ಚಿನ್ನಾಭರಣದಲ್ಲಿ ಮಾತ್ರವಲ್ಲ, ಪ್ರತಿಯೊಂದು ವಿನ್ಯಾಸ ಕ್ಷೇತ್ರಕ್ಕೂ ಅನ್ವಯಿಸುತ್ತದೆ; ಫ್ಯಾಷನ್, ಕಲೆ, ವಾಸ್ತು ವಿನ್ಯಾಸ ಎಲ್ಲದಕ್ಕೂ. ನಿರಂತರ ಹುಡುಕಾಟ ಹಾಗೂ ಕ್ರಿಯಾಶೀಲತೆ ಮಾತ್ರ ಬದಲಾವಣೆಯ ಕೊಂಡಿಗಳು.ಡಿಸೈನ್ ಸ್ಟುಡಿಯೊ ವಿಶೇಷತೆ ಏನು?

ಡಿಸೈನ್ ಸ್ಟುಡಿಯೊಗೆ ಬಂದರೆ ಕಲಾ ಗ್ಯಾಲರಿ ಅಥವಾ ಮ್ಯೂಸಿಯಂಗೆ ಹೋದಂತೆ ಅನ್ನಿಸುತ್ತದೆ. ಇಲ್ಲಿ ಎಲೆಕ್ಟ್ರಾನಿಕ್ ಕ್ಯಾಟಲಾಗ್ ಆಯ್ಕೆ ಇದೆ. ವೃತ್ತಿಪರ ವಿನ್ಯಾಸಕರೊಂದಿಗೆ ಚರ್ಚಿಸಿ ವಿನ್ಯಾಸ ಮಾಡಿಸಿಕೊಳ್ಳುವ ಅವಕಾಶ ಗ್ರಾಹಕರಿಗಿದೆ. ಗ್ರಾಹಕರ ಅಗತ್ಯ, ಅವರ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಆಯ್ಕೆಗಳನ್ನು ನೀಡಲಾಗುತ್ತದೆ. 3ಡಿ ಮೂಲಕ ಗ್ರಾಹಕರಿಗೆ ವಿನ್ಯಾಸದ ಪ್ರತಿ ಹಂತವನ್ನೂ ತೋರಿಸಲಾಗುತ್ತದೆ.ಇದು ಸಾಮಾನ್ಯ ಗ್ರಾಹಕನಿಗೆ ಎಟುಕುವಂಥ ದರದಲ್ಲಿದೆಯೇ?

ಹೌದು. ಆದಷ್ಟೂ ಸಾಮಾನ್ಯ ಗ್ರಾಹಕರನ್ನೂ ಗಮನದಲ್ಲಿಟ್ಟುಕೊಂಡು ಆಭರಣಗಳನ್ನು ವಿನ್ಯಾಸಗೊಳಿಸುತ್ತೇವೆ. ನಮ್ಮ ಆರಂಭಿಕ ಬೆಲೆ `25,000ರೂ.ಕೇವಲ ಮಹಿಳೆಯರನ್ನು ನಿಮ್ಮ ಗ್ರಾಹಕರಾಗಿ ಪರಿಗಣಿಸುತ್ತೀರಾ?

ನಮ್ಮ ಗ್ರಾಹಕರಲ್ಲಿ ಮಹಿಳೆಯರೇ ಮುಖ್ಯ. ಆದರೆ ಪುರುಷರಿಗೂ ಆಯ್ಕೆಗಳಿವೆ. ಬ್ರೇಸ್ಲೆಟ್, ಟೈ ಪಿನ್, ವೆಡಿಂಗ್ ಬ್ಯಾಂಡ್‌ ಹೀಗೆ ಅವರಿಗೂ ಆಯ್ಕೆಗಳಿವೆ. ಕಾರ್ಪೊರೇಟ್ ಸಂಸ್ಥೆಗಳಿಗೂ ವಿನ್ಯಾಸಿತ ಉಡುಗೊರೆಗಳನ್ನು ನೀಡಬಹುದು.ವಿನ್ಯಾಸದ ಹಿಂದಿನ ಪ್ರೇರಣೆ?

ವಿನ್ಯಾಸಗಳಿಗೆ ಪ್ರಕೃತಿಯೇ ಪ್ರೇರಣೆ. ಕೇವಲ ಒಡವೆಗಳನ್ನು ವಿನ್ಯಾಸಗೊಳಿಸುವುದಷ್ಟೇ ನಮ್ಮ ಕೆಲಸವಲ್ಲ. ಕೆಲವು ಪರಿಕಲ್ಪನೆಯೊಂದಿಗೆ ಆಭರಣಗಳನ್ನು ವಿನ್ಯಾಸಗೊಳಿಸುವುದು ನಮ್ಮ ವಿಶೇಷ. ಪೊಯೆಟಿಕ್ ಹ್ಯೂಸ್, ‘ನೇಚರ್ಸ್‌ ರೆವೆರಿ’, ‘ಕಲರ್ಸ್‌ ಆಫ್ ಲವ್’, ‘ಎನ್‌ಟ್ವಿನ್ಡ್ ಡ್ರೀಮ್ಸ್’, ಆಸ್ಟ್ರಲ್, ಅರ್ಬನ್ ಫ್ಯಾಂಟಸಿ, ಹೈ ಎಂಡ್ ಕಲೆಕ್ಷನ್, ಡ್ರೀಮ್ ವೀವರ್ಸ್‌  ಎಂಬ ಸಂಗ್ರಹಗಳಿವೆ. ಎಲೆ, ಚಿಟ್ಟೆ, ಹಕ್ಕಿ, ಹೂವಿನ ವಿನ್ಯಾಸಗಳನ್ನು ನಾಜೂಕಾಗಿ ಮೂಡಿಸಿರುವುದು ಗಮನ ಸೆಳೆಯುತ್ತದೆ. ಲೈಫ್ ಸ್ಟೋರ್‌ನ ಸಂಪರ್ಕ ಸಂಖ್ಯೆ: 080 4944 5300. ಸಂದರ್ಶನ:

 

ಪ್ರತಿಕ್ರಿಯಿಸಿ (+)