ಗುರುವಾರ , ನವೆಂಬರ್ 14, 2019
18 °C

ವಾಹನಗಳಿಗೆ ಕಪ್ಪುಬಣ್ಣದ ಪಟ್ಟಿ

Published:
Updated:

ಎಲ್ಲ ವಾಹನಗಳ  ತಲೆ ದೀಪ  (ಹೆಡ್‌ಲೈಟ್)ಗಳಿಗೆ ಕಪ್ಪು ಬಣ್ಣದ ಪಟ್ಟಿಯನ್ನು ಲಗತ್ತಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ವಾಹನಗಳ ದೀಪಕ್ಕೆ ಈ ಕಪ್ಪು ಬಣ್ಣದ ಪಟ್ಟಿ ಕಾಣುತ್ತಿಲ್ಲ. ಇದರಿಂದಾಗಿ, ರಾತ್ರಿಯಲ್ಲಿ ಎದುರಿಗೆ ಬರುವ ಇತರ ಚಾಲಕರಿಗೆ, ಪ್ರಖರವಾದ ದೀಪಗಳ  ಬೆಳಕಿನಿಂದ ಕಣ್ಣು ಕೋರೈಸಿ ವಾಹನ ಚಲಿಸುವುದು ಬಹಳ ಕಷ್ಟವಾಗುತ್ತದೆ ಹಾಗೂ ರಸ್ತೆಯಲ್ಲಿ ಬಹಳ ತಗ್ಗು ದಿಣ್ಣೆಗಳ ಹಾವಳಿಯಂತೂ ಹೇಳ ತೀರದು. >ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಸಾರಿಗೆ/ಪೊಲೀಸ್ ಇಲಾಖೆ ಮುಖ್ಯಸ್ಥರು ತಕ್ಷಣವೇ ಗಮನವಿಟ್ಟು, ದೀಪಗಳಿಗೆ ಮತ್ತೆ ಕಪ್ಪು ಪಟ್ಟಿಯನ್ನು ಎಲ್ಲಾ ವಾಹನಗಳ ಚಾಲಕರು ಅಳವಡಿಸುವಂತೆ ಆದೇಶಿಸಲು ವಿನಂತಿ.

ಪ್ರತಿಕ್ರಿಯಿಸಿ (+)