ಶನಿವಾರ, ಅಕ್ಟೋಬರ್ 19, 2019
28 °C

ವಾಹನ ಚಾಲನೆ ಜಾಗ್ರತೆ ವಹಿಸಿ

Published:
Updated:

ತರೀಕೆರೆ:  ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಬೇಕಾದಲ್ಲಿ ವಾಹನ ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು ಎಂದು ತರೀಕೆರೆ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಎಸ್.ಸುರೇಶ್ ತಿಳಿಸಿದರು.ಇಲ್ಲಿನ ಎಸ್‌ಜೆಎಂ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ ಎಂದರು.ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ. ಎಚ್.ಕೃಷ್ಣಮೂರ್ತಿ ಮಾತನಾಡಿ  ಸಂಚಾರದ ಸಮಯದಲ್ಲಿ ಮನಸ್ಸಿನ ಗಮನವನ್ನು ಬೇರೆಡೆಗೆ ಹೋಗದಂತೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದರು. ಎನ್‌ಎಸ್‌ಎಸ್ ಘಟಕ ಅಧಿಕಾರಿ ಪ್ರೊ. ಚವಾಣ್,  ಪಿಎಸ್‌ಐ ರಾಜಶೇಖರ್ ಮತ್ತು ರವಿಕುಮಾರ್ ಧರಮಟ್ಟಿ ಇದ್ದರು.

Post Comments (+)