ಬುಧವಾರ, ಅಕ್ಟೋಬರ್ 23, 2019
27 °C

ವಾಹನ ಚಾಲನೆ ಸುರಕ್ಷಿತವಾಗಿರಲಿ

Published:
Updated:

ಚಿಕ್ಕಬಳ್ಳಾಪುರ: ವಾಹನ ಚಾಲನೆ ಮಾಡುವ ವೇಳೆ ಚಾಲಕರು ಜಾಗರೂಕರಾಗಿರಬೇಕು. ಚಾಲನೆ ವೇಳೆ ಒಂದು ಸಣ್ಣ ತಪ್ಪಿನಿಂದ ತಮ್ಮ ಜೀವವೇ ಹೋಗಬಹುದು ಅಥವಾ ಇನ್ನೊಬ್ಬರ ಪ್ರಾಣಕ್ಕೆ ಹಾನಿ ಉಂಟಾಗಬಹುದು ಎಂಬ ಅರಿವು ಚಾಲಕರಲ್ಲಿ ಇರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಿ.ಜೆಟ್ಟಣ್ಣವರ್ ತಿಳಿಸಿದರು.ಆಟೊರಿಕ್ಷಾ, ಮ್ಯಾಕ್ಸಿಕ್ಯಾಬ್ ವಾಹನ ಚಾಲಕರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ನಗರದ ಸಿಟಿಜನ್ಸ್ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ನಿರ್ಲಕ್ಷ್ಯ ಚಾಲನೆಯಿಂದ ಯಾರಿಗಾದರೂ ಅಪಾಯವಾಗದೆ ಇರುವುದಿಲ್ಲ.ವಾಹನ ಚಾಲನೆ ಎಂಬುದು ಗಂಭೀರವಾದದ್ದು ಎಂದು ಪರಿಗಣಿಸದೆ ಅದನ್ನು ಮೋಜು ಎಂದು ಭಾವಿಸಿದಾಗಲೇ ಅವಘಡಗಳು ಹೆಚ್ಚು ಸಂಭವಿಸುತ್ತವೆ. ಸುರಕ್ಷತೆಗೆ ಆದ್ಯತೆ ನೀಡಬೇಕು~ ಎಂದರು.ಡಿವೈಎಸ್‌ಪಿ ಎಂ.ಎಸ್.ಕಾಖಂಡಕಿ, ಸರ್ಕಾರಿ ವಕೀಲ ಜಿ.ಆರ್.ಹರಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಆಟೊರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಡಾಂಬು ಶ್ರೀನಿವಾಸ್, ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಹೇಶ್‌ಕುಮಾರ್, ಸಂಚಾರ ಠಾಣೆ ಎಸ್‌ಐ ನಯಾಜ್ ಬೇಗ್, ನಗರ ಠಾಣೆ ಎಸ್‌ಐ ವಸಂತ್ ಹಾಜರಿದ್ದರು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)