ವಾಹನ ಡಿಕ್ಕಿ: ಅಪರಿಚಿತ ಸಾವು

7

ವಾಹನ ಡಿಕ್ಕಿ: ಅಪರಿಚಿತ ಸಾವು

Published:
Updated:

ಹೊಸಕೋಟೆ: ಬೆಂಗಳೂರು ರಸ್ತೆ ಬೂದಿ­­ಗೆರೆ ಕ್ರಾಸ್ ಬಳಿ ವಾಹನ ಡಿಕ್ಕಿ ಹೊಡೆದು ಅಪರಿಚಿತ ಮೃತಪಟ್ಟ ಘಟನೆ ಬುಧವಾರ ನಡೆದಿದೆ.40 ವರ್ಷ ವಯಸ್ಸಿನ ವ್ಯಕ್ತಿ ಬಿಳಿ ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದರು. ಶವವನ್ನು ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ.ಶವ ಪತ್ತೆ: ಆವಲಹಳ್ಳಿ  ಠಾಣೆ ವ್ಯಾಪ್ತಿಯ ಬಿದರಹಳ್ಳಿಯ ಆಂಜ­ನೇಯ ಸ್ವಾಮಿ ದೇವಾಲಯದ ಆವರ­ಣ­ದಲ್ಲಿನ ಕಲ್ಯಾಣಿಯಲ್ಲಿ ಶವ ಪತ್ತೆಯಾಗಿದೆ.ಸುಮಾರು 55 ವರ್ಷ ವಯಸ್ಸಿನ ಆ ವ್ಯಕ್ತಿ ಕಪ್ಪು ಬಣ್ಣದ ಪ್ಯಾಂಟ್, ತುಂಬು ತೋಳಿನ ಗೆರೆಯುಳ್ಳ ಶರ್ಟ್ ಧರಿಸಿದ್ದರು. ಅವರು ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.ಬೈಕ್‌ ಕಳವು

ನೆಲಮಂಗಲ: ಪಟ್ಟಣದ ಇಂದಿರಾ­ನಗರದ ನಿವಾಸಿ ಬಿ.ಎನ್‌.ಪ್ರಕಾಶ್‌ ಅವರು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ ಮಂಗಳವಾರ ರಾತ್ರಿ ಕಳವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry