ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

7

ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

Published:
Updated:

ಬೆಂಗಳೂರು: ನಾಗರಬಾವಿ ಮುಖ್ಯ­ರಸ್ತೆಯ ಮೂಡಲಪಾಳ್ಯ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಶಾಲಾ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ರವಿಕಿರಣ್ (20) ಎಂಬ ಬಿ.ಕಾಂ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ರವಿಕಿರಣ್, ಮೂಡಲಪಾಳ್ಯದ ಶಿವಾನಂದ­ನಗರ ನಿವಾಸಿ ಈಶ್ವರಪ್ಪ ಎಂಬುವರ ಮಗ.

ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದರು. ಬೆಳಿಗ್ಗೆ 7.20ರ ಸುಮಾರಿಗೆ ಮನೆಯಿಂದ ಬೈಕ್‌ನಲ್ಲಿ ಕಾಲೇಜಿಗೆ ಹೋಗುವಾಗ ಮೂಡಲ­ಪಾಳ್ಯ ವೃತ್ತದಲ್ಲಿ ಈ ದುರ್ಘಟನೆ ನಡೆದಿದೆ. ರಾಜರಾಜೇ­ಶ್ವರಿನಗರ ನ್ಯಾಷನಲ್‌ ಹಿಲ್‌ ವಿವ್‌ ಪಬ್ಲಿಕ್‌ ಶಾಲೆಗೆ ಸೇರಿದ ಬಸ್‌ ಹಿಂದಿನಿಂದ ರವಿ­ಕಿರಣ್‌ರ ಬೈಕ್‌ಗೆ ಗುದ್ದಿದೆ.

 ಅಪಘಾತ­ದಿಂದ ಕೆಳಗೆ ಬಿದ್ದ ಅವರ ಮೇಲೆ ವಾಹನ ಹಿಂದಿನ ಚಕ್ರ ಹರಿದ ಪರಿಣಾಮ ರವಿಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಕ್ಕಳನ್ನು ಶಾಲೆಗೆ ಕರೆ­ತರಲು ರಾಜಾಜಿನಗರಕ್ಕೆ ಹೋಗುತ್ತಿದ್ದ ಚಾಲಕ ಕುಮಾರಸ್ವಾಮಿ, ಅಪಘಾತದ ನಂತರ ವಾಹನದೊಂದಿಗೆ ಪರಾರಿ­ಯಾಗಿದ್ದ.

ಈ ಸಂಗತಿ ತಿಳಿದ ಶಾಲಾ ಆಡಳಿತ ಮಂಡಳಿಯ ಅಧಿಕಾರಿಗಳು ಆತನನ್ನು ಸಂಪರ್ಕಿಸಿ ಠಾಣೆಗೆ ಕರೆ­ತಂದರು. ಪ್ರಕರಣ ದಾಖಲಿಸಿಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ­ಲಾಯಿತು’ ಎಂದು ವಿಜಯನಗರ ಸಂಚಾರ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry