ಸೋಮವಾರ, ನವೆಂಬರ್ 18, 2019
23 °C
ಐಪಿಎಲ್ ಕ್ರಿಕೆಟ್: ಕ್ರೀಡಾಂಗಣಕ್ಕೆ ಹರಿದು ಬಂದ ಜನ ಸಾಗರ

ವಾಹನ ದಟ್ಟಣೆ: ಸಂಚಾರ ಸ್ತಬ್ಧ

Published:
Updated:

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಪಾರ ಸಂಖ್ಯೆಯ ಜನರು ಕ್ರೀಡಾಂಗಣಕ್ಕೆ ಹರಿದು ಬಂದ ಕಾರಣ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಹಾತ್ಮ ಗಾಂಧಿ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಕ್ವೀನ್ಸ್ ರಸ್ತೆ, ಇನ್‌ಫೆಂಟ್ರಿ ರಸ್ತೆಗಳಲ್ಲಿ ಸಂಜೆ ಕೆಲಕಾಲ ವಾಹನ ಸಂಚಾರ ಸ್ತಬ್ಧವಾಯಿತು.ಸಂಜೆ 6.30ರಿಂದಲೇ ಜನರು ತಂಡೋಪ ತಂಡವಾಗಿ ಕ್ರೀಡಾಂಗಣದತ್ತ ಬರಲಾರಂಭಿಸಿದರು. ಏಳು ಗಂಟೆ ವೇಳೆಗೆ ಕನ್ನಿಂಗ್ ಹ್ಯಾಮ್ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಬೌರಿಂಗ್ ಆಸ್ಪತ್ರೆ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಾಮರಾಜ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಕಸ್ತೂರ ಬಾ ರಸ್ತೆ, ರಾಜಭವನ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಹಳೆಯ ಮದ್ರಾಸ್ ರಸ್ತೆ, ಹಲಸೂರು ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.ಮಹಾತ್ಮ ಗಾಂಧಿ ರಸ್ತೆಯಲ್ಲಿ ಟ್ರಿನಿಟಿ ವೃತ್ತದಿಂದಲೇ ಮಂದಗತಿಯ ವಾಹನ ಸಂಚಾರ ಕಂಡುಬಂತು. ಬ್ರಿಗೇಡ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಗಂಟೆ ಗಟ್ಟಲೆ ರಸ್ತೆಯ ಮೇಲೆಯೇ ಕಳೆಯಬೇಕಾಯಿತು.ಮಹಾತ್ಮ ಗಾಂಧಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ `ನಮ್ಮ ಮೆಟ್ರೊ' ನಿಲ್ದಾಣದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಪ್ರತಿಕ್ರಿಯಿಸಿ (+)