ಶನಿವಾರ, ಮೇ 8, 2021
26 °C

ವಾಹನ ನಿಲುಗಡೆ ನಿಷೇಧಿಸಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೃದಯ ಭಾಗದ ರಸ್ತೆಗಳ ವಾಹನ ದಟ್ಟಣೆ ಹೆಚ್ಚಳದ ಹಿನ್ನೆಲೆಯಲ್ಲಿ ಇಂದಿರಾನಗರ ಹಾಗೂ ಹಲಸೂರು ಸಂಚಾರ ವಿಭಾಗದ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ದೊಮ್ಮಲೂರು 2ನೇ ಹಂತದ ಸರ್ವೀಸ್ ರಸ್ತೆಯಲ್ಲಿ 17ನೇ ಮುಖ್ಯರಸ್ತೆಯಿಂದ 12 ನೇ ಮುಖ್ಯರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಉತ್ತರ ಭಾಗದಲ್ಲಿ ಪಾರ್ಕ್ ಕಡೆಗೆ, ನಾಗವಾರಪಾಳ್ಯ ಮುಖ್ಯರಸ್ತೆಯಲ್ಲಿ ಬೆನ್ನಿಗಾನಹಳ್ಳಿ ಜಂಕ್ಷನ್‌ನಿಂದ ಡಿ.ಆರ್.ಡಿ.ಓ ಹಿಂಬದಿಯ ಗೇಟ್ ವರೆಗೆ ಹಾಗೂ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಎಂ.ಕೆ. ರಿಟೇಲ್ ಷಾಪ್‌ನಿಂದ ಕಗ್ಗದಾಸಪುರ ರೈಲ್ವೆ ಗೇಟ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.ಹೆಚ್.ಎ.ಎಲ್ 2 ನೇ ಹಂತದ 4ನೇ ಅಡ್ಡರಸ್ತೆಯಲ್ಲಿ 12 ನೇ ಮುಖ್ಯರಸ್ತೆ ಜಂಕ್ಷನ್‌ನಿಂದ 8 ನೇ ಮುಖ್ಯರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಪೂರ್ವ ಭಾಗದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿ ಪಶ್ಚಿಮದ ಕಡೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.ಬಿ.ಎಂ.ಟಿ.ಸಿ ಕಾಂಪ್ಲೆಕ್ಸ್ ನಿಂದ ದೊಮ್ಮಲೂರಿನವರೆಗೆ 2ನೇ ಕ್ರಾಸ್ ರಸ್ತೆ ಶಂಕರನಾಗ್ ಕ್ರಾಸ್‌ನಿಂದ ದೊಮ್ಮಲೂರು 2ನೇ ಹಂತ 1ನೇ ಮುಖ್ಯರಸ್ತೆವರೆಗೆ, ವಾಟರ್‌ಟ್ಯಾಂಕ್ ಕ್ರಾಸ್ ಹಳೇ ಏರ್‌ಪೋರ್ಟ್ ರಸ್ತೆಯಿಂದ ಬಿ.ಎಂ.ಟಿ.ಸಿ ಕಾಂಪ್ಲೆಕ್ಸ್ ವರೆಗೆ, ಶನಿಮಹಾತ್ಮ ದೇವಸ್ಥಾನ ರಸ್ತೆಯ ಶನಿಮಹಾತ್ಮ ದೇವಸ್ಥಾನದಿಂದ 3 ನೇ ಕ್ರಾಸ್ ಜಂಕ್ಷನ್ ವರೆಗೆ ಹಾಗೂ ಬಿ.ಡಿ.ಎ ಕಾಂಪ್ಲೆಕ್ಸ್ ರಸ್ತೆಯಲ್ಲಿ ಬಿ.ಎಂ.ಟಿ.ಸಿ ಕಾಂಪ್ಲೆಕ್ಸ್ ನಿಂದ ಡೈಲಿ ಫ್ರೆಷ್ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.ಶಾಂತಿಸಾಗರ್ ಹೋಟೆಲ್ ಕಡೆಯಿಂದ ದೊಮ್ಮಲೂರು ಸರ್ವೀಸ್ ರಸ್ತೆವರೆಗೆ, ಒಳವರ್ತುಲ ರಸ್ತೆಯ ಪ್ರವೇಶದಿಂದ ಸ್ಕೂಲ್ ಜಂಕ್ಷನ್ ವರೆಗೆ, 1 ನೇ ಮುಖ್ಯರಸ್ತೆ 14 ಅಡ್ಡರಸ್ತೆಯಿಂದ 7 ನೇ ಅಡ್ಡರಸ್ತೆವರೆಗೆ , 14 ನೇ ಅಡ್ಡರಸ್ತೆಯಲ್ಲಿ ಸಿ.ಪಿ.ಡಬ್ಲ್ಯೂ.ಡಿ ಕ್ವಾಟ್ರಸ್ ನಿಂದ 2 ನೇ ಮುಖ್ಯರಸ್ತೆ ವರೆಗೆ, 2 ನೇ ಮುಖ್ಯರಸ್ತೆಯಲ್ಲಿ ಒಳವರ್ತುಲ ರಸ್ತೆಯಿಂದ 7 ನೇ ಅಡ್ಡರಸ್ತೆವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.1 ನೇ ಮುಖ್ಯರಸ್ತೆಯಲ್ಲಿ 7ನೇ ಅಡ್ಡರಸ್ತೆಯಿಂದ ದೊಮ್ಮಲೂರು ಅರಳೀಕಟ್ಟೆ ಕ್ರಾಸ್ ವರೆಗೆ , 7 ನೇ ಅಡ್ಡರಸ್ತೆಯ ಸಿಗ್ನಲ್‌ನಿಂದ ಕೆನರಾ ಬ್ಯಾಂಕ್ ವರೆಗೆ, 2 ನೇ ಅಡ್ಡರಸ್ತೆಯ ಸರ್ವೀಸ್ ರಸ್ತೆಯಿಂದ ದೊಮ್ಮಲೂರು ಮುಖ್ಯರಸ್ತೆವರೆಗೆ, 13 ನೇ ಅಡ್ಡರಸ್ತೆಯ 1 ನೇ ಮುಖ್ಯರಸ್ತೆಯಿಂದ ಸರ್ಕಾರಿ ಪಿ.ಯು.ಸಿ ಕಾಲೇಜ್‌ವರೆಗೆ ಹಾಗೂ 1 ನೇ ಮುಖ್ಯರಸ್ತೆಯ 6 ನೇ ಅಡ್ಡರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.