ಭಾನುವಾರ, ಏಪ್ರಿಲ್ 11, 2021
29 °C

ವಾಹನ ಸಂಚಾರ ಅಸ್ತವ್ಯಸ್ತ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಚುನಾವಣಾ ಅಧಿಕಾರಿ ಕಚೇರಿ ಮುಂಭಾಗದ ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಜಮಾಯಿಸಿದ್ದರು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆದರೆ ಈ ಸಂದರ್ಭದಲ್ಲಿ ರಸ್ತೆ ಸಂಚಾರ ಸ್ವಲ್ಪ ದುಸ್ತರವಾಗಿತ್ತು.

 

ನಂತರ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಹೆದ್ದಾರಿ ಮಧ್ಯಯೇ ಲಾರಿಯ ಮೇಲೆ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಬಹಿರಂಗ ಭಾಷಣ ಮಾಡಿದರು. ಈಶ್ವರಪ್ಪ ಹಾಗೂ ಯೋಗೇಶ್ವರ್ ಅವರು ಇಬ್ಬರೂ ರಸ್ತೆಯಲ್ಲಿಯೇ ಭಾಷಣ ಮಾಡಿದ್ದರಿಂದ ಹೆದ್ದಾರಿಯಲ್ಲಿ ಅರ್ಧ ಗಂಟೆ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

 

ಮೈಸೂರು ಕಡೆ ಹೋಗುವ ಪಥದ ರಸ್ತೆ ಸಂಪೂರ್ಣ ‘ಜಾಮ್’ ಆಗಿತ್ತು. ಹಾಗಾಗಿ ಬೆಂಗಳೂರು ಮಾರ್ಗದ ಪಥದದಲ್ಲಿಯೇ ಎರಡೂ ಕಡೆಯ ವಾಹನಗಳನ್ನು ಚಲಿಸಲು ಪೊಲೀಸರು ಅವಕಾಶ ಕಲ್ಪಿಸಿಕೊಟ್ಟರು. ಇದರಿಂದ ವಾಹನ ಸವಾರರು ಕಿರಿಕಿರಿ ಎದುರಿಸಬೇಕಾಯಿತು. ಕೆಲ ವಾಹನ ಸವಾರರು ಹಾಗೂ ನಾಗರಿಕರು ರಾಜಕಾರಣಿಗಳನ್ನು ಹಾಗೂ ಹೆದ್ದಾರಿ ನಡುವೆಯೇ ಭಾಷಣ ಮಾಡಲು ಅವಕಾಶ ಕೊಟ್ಟ ಪೊಲೀಸರನ್ನು ಶಪಿಸುತ್ತಿದ್ದ ದೃಶ್ಯ ಕಂಡು ಬಂದಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.