ವಾಹನ ಸವಾರರಿಗೆ ನಿತ್ಯ ಅಪಘಾತ ಭೀತಿ

ಗುಬ್ಬಿ: ರಾಷ್ಟ್ರೀಯ ಹೆದ್ದಾರಿ 206ರ ಮೇಲೆ ಅಲಲ್ಲಿ ನಿರ್ಮಿಸಿರುವ ರಸ್ತೆ ಉಬ್ಬುಗಳು ನಿತ್ಯ ಪ್ರಯಾಣಿಸುವ ವಾಹನ ಸವಾರರಿಗೆ ಸಾವಿನ ಭೀತಿಯನ್ನು ತಂದಿತ್ತಿವೆ. ಇಂತಹ ಭೀತಿಯ ಚಿತ್ರಣ ತಾಲ್ಲೂಕಿನ ದೊಡ್ಡಗುಣಿ ಕೆರೆ ಏರಿಮೇಲೆ ನಿತ್ಯ ಕಾಣಬಹುದಾಗಿದೆ. ಮೂರು ಕಡೆ ರಸ್ತೆ ಉಬ್ಬುಗಳನ್ನು ಅಡ್ಡಾದಿಡ್ಡಿ ನಿರ್ಮಿಸಲಾಗಿದೆ.
ಕೆರೆಯ ಏರಿ ಮೇಲಿನ ತಿರಿವಿನಲ್ಲಿ ತಿಪಟೂರು ಮಾರ್ಗದಿಂದ ತುಮಕೂರಿನತ್ತ ಸಾಗುವ ವಾಹನಗಳು ಎಡಭಾಗದಲ್ಲಿ ಚಲಿಸದೇ, ಬಲಭಾಗದಲ್ಲಿ ಚಲಿಸುತ್ತಿವೆ. ರಸ್ತೆಯಲ್ಲಿ ನಿರ್ಮಿಸಿರುವ ರಸ್ತೆ ಉಬ್ಬುಗಳೇ ಇದಕ್ಕೆ ಕಾರಣವಾಗಿದೆ. ತುಮಕೂರು ಕಡೆಯಿಂದ ತಿಪಟೂರು, ಶಿವಮೊಗ್ಗದತ್ತ ಸಾಗುವ ವಾಹನ ಚಾಲಕರು ಒಂದು ಕ್ಷಣ ವಿಚಲಿತರಾಗುತ್ತಾರೆ ಬೇರೆ ಇನ್ಯಾವುದೇ ರಸ್ತೆಗೆ ದಿಕ್ಕು ತಪ್ಪಿ ಬಂದೆವಾ ಎಂದು ವಾಹನ ನಿಲ್ಲಿಸುವುದು ಮತ್ತೆ ಮುಂದೆ ಸಾಗುವುದು ನಿತ್ಯ ಕಾಣುವ ದೃಶ್ಯವಾಗಿದೆ.
ಸಾರಿಗೆ ಬಸ್ ಚಾಲಕರಿಗೆ ನಿತ್ಯ ಈ ರಸ್ತೆ ಉಬ್ಬುಗಳು ತಲೆನೋವಾಗಿದೆ. ರೋಸಿ ಹೋದ ಕೆಲ ಪ್ರಯಾಣಿಕರು ರಸ್ತೆ ಉಬ್ಬು ತಪ್ಪಿಸಿ ವಾಹನ ಓಡಿಸಿ ಎಂದು ಹೇಳುವುದೂ ಇದೆ. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ರಸ್ತೆ ಉಬ್ಬುಗಳು ಇವೆ. ಆದರೆ ಇಲ್ಲಿ ಒಂದೇ ಕಡೆ ಮೂರು ಉಬ್ಬುಗಳನ್ನು ಒಂದರ ಪಕ್ಕದಲ್ಲೊಂದರಂತೆ ನಿರ್ಮಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಕಳೆದ ವಾರ ದ್ವಿಚಕ್ರವಾಹನ ಸವಾರ ಒಂದು ರಸ್ತೆ ಉಬ್ಬು ದಾಟಿ, ಎರಡನೇ ಉಬ್ಬು ದಾಟುವ ಹೊತ್ತಿಗೆ ವಾಹನ ಹಠಾತ್ ನಿಂತು ಬಿಡುತ್ತದೆ. ದ್ವಿಚಕ್ರ ವಾಹನವನ್ನು ರಸ್ತೆ ಬದಿಗೆ ಸರಿಸುವಷ್ಟರಲ್ಲೇ, ಮತ್ತೊಂದು ದ್ವಿಚಕ್ರವಾಹನ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿರುತ್ತದೆ. ಡಿಕ್ಕಿ ಹೊಡೆದು ವಾಹನ ಜಕಂ ಆದಾಗ ಲೈಟ್, ಇಂಡಿಕೇಟರ್ ಇತರ ವಸ್ತುಗಳು ಒಡೆದು ಚೂರಾಗಿದ್ದು ಈ ರಸ್ತೆ ಉಬ್ಬುಗಳ ಸುತ್ತಮುತ್ತ ಕಾಣಿಸುತ್ತದೆ.
***
ಕಣ್ಣಿಗೆ ದೂಳು
ಸರ್ಕಾರಿ ಬಸ್ ಗಳು ರಸ್ತೆ ಉಬ್ಬು ಬಳಸಿ ಸಾಗುವಾಗ ಸಾರಿಗೆ ನಿಯಮ ಮೀರಿ ಸಂಚರಿಸಬೇಕಾದ ಅನಿರ್ವಾಯವಾಗಿದೆ. ವಾಹನ ಚಾಲನೆ ಮಾಡಿಕೊಂಡು ಹೋಗುವುದರಿಂದ ದೂಳು ಏಳುತ್ತದೆ. ಸಣ್ಣಪುಟ್ಟ ವಾಹನಗಳು ಸಾವರಿಸಿಕೊಂಡು ಸಾಗಬೇಕು. ಚಾಲಕರು ಕಣ್ಣಿಗೆ ದೂಳು ತುಂಬಿಕೊಳ್ಳುತ್ತದೆ.
-ತಿಪ್ಪಣ್ಣ, ಗೂಡ್ಸ್ ಆಟೋ ಚಾಲಕ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.