ಬುಧವಾರ, ಜೂನ್ 23, 2021
24 °C

ವಾಹಿನಿ ವಿರುದ್ಧ ದೋನಿ ಮಾನನಷ್ಟ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ಝಿ ಮೀಡಿಯಾ ಕಾರ್ಪೋರೇಷನ್‌ ಲಿಮಿಟೆಡ್‌ ನನ್ನ ವಿರುದ್ಧ ದುರುದ್ದೇಶ ಪೂರ್ವಕವಾಗಿಯೇ ವರದಿಗಳನ್ನು ಪ್ರಕಟಿಸಿದೆ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಆರೋಪಿಸಿದ್ದು, ವಾಹಿನಿ ವಿರುದ್ಧ ₨ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಝಿ ನ್ಯೂಸ್‌ ಮತ್ತು ಇತರ ರಾಷ್ಟ್ರೀಯ ವಾಹಿನಿಗಳು ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ಗೆ ಸಂಬಂಧಿ ಸಿದಂತೆ ವರದಿ ಮಾಡುವಾಗ ದೋನಿ ಹೆಸರನ್ನು ಬಳಸುವಂತಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ತಾಕೀತು ಮಾಡಿದೆ. ಈ ಆದೇಶ ಎರಡು ವಾರ ಜಾರಿಯಲ್ಲಿರುತ್ತದೆ.ದೋನಿ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಝಿ ಮೀಡಿಯಾ ಕಾರ್ಪೊ ರೇಷನ್‌ ಲಿಮಿಟೆಡ್‌್, ‘ನಮ್ಮ ವಾಹಿನಿ ಮಾರುವೇಷದ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ವಿಂದು ದಾರಾ ಸಿಂಗ್‌ ಮತ್ತು ಐಪಿಎಸ್‌ ಅಧಿಕಾರಿ ಸಂಪತ್‌ ಕುಮಾರ್‌ ಹೇಳಿಕೆಯನ್ನು ಆಧರಿಸಿ ವರದಿ ಪ್ರಸಾರ ಮಾಡಲಾ ಗಿದೆ’ ಎಂದು ಹೇಳಿದೆ. ಈ ವರದಿ ಹೋದ ತಿಂಗಳು 24 ಮತ್ತು 28ರಂದು ಪ್ರಸಾರವಾಗಿತ್ತು.‘ಝಿ ಮೀಡಿಯಾ ಕಾರ್ಪೋರೇಷನ್‌ ಲಿಮಿಟೆಡ್‌ ಜವಾಬ್ದಾರಿಯುತ ವಾಹಿನಿಯಾಗಿದೆ. ಮಾರುವೇಷದ ಕಾರ್ಯಾಚರಣೆ ನಡೆಸಿದ ವೇಳೆ ತಿಳಿದ ಸತ್ಯವನ್ನಷ್ಟೇ ಪ್ರಸಾರ ಮಾಡಿದ್ದೇವೆ. ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ನೇತೃತ್ವದ ಸಮಿತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಮುದ್ರಣ ಮಾಧ್ಯಮಗಳೂ ಈ ವರದಿಯನ್ನು ಪ್ರಕಟಿಸಿವೆ’ ಎಂದು ಮಾಧ್ಯಮ ಸಂಸ್ಥೆ ಪ್ರಕಟಣೆ ನೀಡಿದೆ.‘ಉದ್ದೇಶ ಪೂರ್ವಕವಾಗಿ ದೋನಿ ಹೆಸರು ಬಳಸಿಕೊಂಡು ವರದಿ ಪ್ರಸಾರ ಮಾಡಿಲ್ಲ. ದೋನಿ ಆರೋಪ ನಿರಾ ಧಾರ. ನಾವು ದಾಖಲೆ ಸಹಿತ ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಮಾಧ್ಯಮ ಸಂಸ್ಥೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.