ಭಾನುವಾರ, ಡಿಸೆಂಬರ್ 15, 2019
18 °C

ವಾಹ್! ವಾಲ್..! ಕ್ಷೌರಕ್ಕೆ ಇನ್ನು ಕತ್ತರಿಯ ಹಂಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹ್! ವಾಲ್..! ಕ್ಷೌರಕ್ಕೆ ಇನ್ನು ಕತ್ತರಿಯ ಹಂಗಿಲ್ಲ

ಕತ್ತರಿಯಿಲ್ಲದೆ ಕೇಶ ವಿನ್ಯಾಸವನ್ನು ಊಹಿಸಬಹುದೆ?   ಕತ್ತರಿ ಬೇಡ, ಬಾಚಣಿಕೆಯೂ ಬೇಡ. ಕತ್ತು ತಗ್ಗಿಸಿ, ಗಂಟೆಗಟ್ಟಲೆ ಕೂರುವುದೂ ಬೇಡ. ಕ್ಷೌರ ಮಾಡುವಾಗ ತಲೆತಗ್ಗಿಸಿ, ಅವರು ಹೇಳಿದಂತೆ ಆಡುವುದರ ಅಗತ್ಯವೂ ಇನ್ನಿಲ್ಲ.

ಭಾರತೀಯ ಸೌಂದರ್ಯ ಹಾಗೂ ಕ್ಷೌರ ಕ್ಷೇತ್ರಕ್ಕೆ (ಬ್ಯೂಟಿ ಅಂಡ್ ಬಾರ್ಬರ್) ವಾಲ್ ಕ್ಲಿಪ್ಪರ್ಸ್‌ ಕಾರ್ಪೋರೇಷನ್ ಈಗ ಭಾರತದಲ್ಲೂ ಕ್ಲಿಪ್ಪರ್ಸ್‌ ಅಂಡ್ ಟ್ರಿಮ್ಮರ್ ಬಿಡುಗಡೆಗೊಳಿಸಿದೆ.

ಅಂತರರಾಷ್ಟ್ರೀಯ ಕ್ರಿಯೆಟಿವ್ ಡೈರೆಕ್ಟರ್ ಸೈಮನ್ ಶಾ ಪ್ರಕಾರ `ಕತ್ತರಿಯಿಂದ ಬಿಡುಗಡೆ ಪಡೆಯುವುದೇ ನೂತನ ಪರಿಕಲ್ಪನೆಯಾಗಿದೆ. ಇಷ್ಟು ದಿನ ಕೇವಲ ಪುರುಷರಿಗೆ ಕ್ಷೌರ ಮಾಡುವಾಗ ಟ್ರಿಮ್ಮರ್‌ಗಳನ್ನು ಕತ್ತಿನ ಹಿಂಭಾಗದಲ್ಲಿ ಮಾತ್ರ ಬಳಸಲಾಗುತ್ತಿತ್ತು. ನಂತರದ ದಿನಗಳಲ್ಲಿ ವಿವಿಧ ಬಗೆಯ ಕೇಶ ವಿನ್ಯಾಸಕ್ಕಾಗಿ ಟ್ರಿಮ್ಮರ್ ಬಳಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರಿಗೂ ಟ್ರಿಮ್ಮರ್ ಮೂಲಕ ಕೇಶ ವಿನ್ಯಾಸಗೊಳಿಸಲು ಉಪಕರಣವನ್ನು ಸಜ್ಜುಗೊಳಿಸಲಾಗಿದೆ~ ಎನ್ನುತ್ತಾರೆ.

ಬೆಂಗಳೂರಿನ ಪ್ರಥಮ ಯುನಿಸೆಕ್ಸ್ ಸೆಲೂನ್ ಎಂಬ ಖ್ಯಾತಿಯ ಸ್ಪ್ರಾತ್‌ನಲ್ಲಿ `ಬ್ಯೂಟಿ ಅಂಡ್ ಗ್ರೂಮಿಂಗ್~ ಸೆಷನ್ ಮೂಲಕ ತಮ್ಮ ಪರಿಕರಗಳ ಪರಿಚಯ ನೀಡುವ ಕಾರ್ಯಕ್ರಮವನ್ನು ವಾಲ್ ಹಮ್ಮಿಕೊಂಡಿತ್ತು.

ವಾಲ್‌ನ ಇಂಟರ್‌ನ್ಯಾಷನಲ್ ಆರ್ಟಿಸ್ಟ್ ತಂಡವೇ ದೇಶದ ವಿವಿಧ ಭಾಗಗಳಿಂದ ಈ ಉಪಕರಣಗಳ ಬಳಕೆಯ ಕಲಿಕೆಗೆ ಬೆಂಗಳೂರಿಗೆ ಬಂದಿಳಿದಿತ್ತು.

ವೈಯಕ್ತಿಕ ಸೌಂದರ್ಯ ಈಗ ವಿಲಾಸಿಮಯ ಬದುಕಿನ ಭಾಗವಾಗಿ ಉಳಿದಿಲ್ಲ. ಅದೀಗ ದೈನಂದಿನ ಜೀವನದ ಅತ್ಯಗತ್ಯವಾಗಿ ಬೆಳೆದುಬಂದಿದೆ. ಕಾಲೇಜಿಗೆ ಹೋಗುವ ಹದಿಹರೆಯದವರಿಗೂ ತಮ್ಮ `ಲುಕ್~ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಬಗ್ಗೆ ಅರಿವಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ತಮಗೆ ಹೊಂದುವ `ಮೇಕಪ್~ನಲ್ಲಿ ಕಾಣಲು ಇಷ್ಟ ಪಡುತ್ತಾರೆ. ಇದೇ ಕಾರಣಕ್ಕೆ ಹೇರ್ ಕಟ್‌ನಿಂದ ಹೇರ್‌ಸ್ಟೈಲಿಸ್ಟ್‌ವರೆಗೂ ನಾಪಿತ ಕ್ಷೇತ್ರಗಳಲ್ಲಿ ಹುದ್ದೆಗಳೂ ಬದಲಾಗಿವೆ ಎನ್ನುತ್ತಾರೆ ನವದೆಹಲಿಯ ಅಮಲಿ ಕಂದಸ್ವಾಮಿ.

ಕೇಶ ವಿನ್ಯಾಸ, ಶೈಲಿ, ವರ್ಣ ಮುಂತಾದವುಗಳಿಗೆಲ್ಲ ವಿಭಿನ್ನ ಕಲಾವಿದರ ತಂಡಗಳೇ ಸಿದ್ಧವಾಗಿವೆ. ಈ ವೃತ್ತಿಪರ ನಿಲುವಿಗೆ ತಕ್ಕಂತೆ ತಂತ್ರಜ್ಞಾನವೂ ಬದಲಾಗುತ್ತಿದೆ. ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ ಜನರಲ್ಲಿ ಅರಿವು ಅಗತ್ಯ. ಅದನ್ನು ಗ್ರಾಹಕರಿಗೆ ಹಾಗೂ ಕ್ಷೌರ ಕೌಶಲ ಹೊಂದಿರುವ ಸೌಂದರ್ಯ ತಜ್ಞರಿಗೆ ತಲುಪಿಸುವ ಕೆಲಸವನ್ನು ಈ ಆರ್ಟಿಸ್ಟ್ ತಂಡ ಮಾಡುತ್ತಿದೆ ಎಂದು ಸೈಮನ್‌ಶಾ ವಿವರಿಸಿದರು.

ಮುಂಬೈನಿಂದ ಬಂದ ರೆನೆಗೆ ಈ ಪರಿಕರಗಳಲ್ಲಿಯ ನೈರ್ಮಲ್ಯ, ಮರುಬಳಕೆಗೆ ಇರುವ ಹೆಚ್ಚಿನ ಅವಕಾಶ ಹಾಗೂ ಅಗತ್ಯಕ್ಕೆ ತಕ್ಕಂತೆ ಬದಲಿಸುವ ಬಳಸುವ ಕೌಶಲ ಇಷ್ಟವಾಗಿದೆಯಂತೆ. ಇನ್ನು ಕ್ಷೌರ ಕಷ್ಟಕರವೂ ಅಲ್ಲ, ಕ್ಲಿಷ್ಟಕರವೂ ಅಲ್ಲ. ಯಾವುದೇ ವಿನ್ಯಾಸವಾದರೂ ಒಂದೇ ಕಾಲಕ್ಕೆ ಕೂದಲನ್ನು ಸಮಗೊಳಿಸುತ್ತಲೇ ಕತ್ತರಿಸಬಹುದು. ಕೂದಲುಂಗುರ ಸೃಷ್ಟಿಸಲು ಹೆಚ್ಚು ಸಮಯ ಬೇಕಾಗದು ಎನ್ನುತ್ತಾರೆ ಅವರು.

ಗುಜರಾತ್‌ನ ಅಹ್ಮದಾಬಾದ್‌ನಿಂದ ಬಂದಿದ್ದ ಅಶೀಶ್‌ಗೆ ಇದು ಕೆಲಸ ಸರಳಗೊಳಿಸುತ್ತದೆ ಎಂದೆನಿಸುತ್ತದೆ. ಕತ್ತರಿ ಬಳಸುವಾಗ ಪ್ರತಿ ಸಲವೂ ಎರಡೂ ಕೈ, ಮುಂಗೈ ಹಾಗೂ ಮಣಿಕಟ್ಟಿನ ಮೇಲೆ ಜೋರು ಬೀಳುತ್ತದೆ.

ಪ್ರತಿಸಲವೂ ಕೂದಲನ್ನು ಸಮಗೊಳಿಸುವಾಗ ತುದಿಗಾಲಿನ ಮೇಲೆ ನಿಂತು ಭುಜಗಳನ್ನು ಸಮನಾಂತರವಾಗಿ ಹಿಡಿದು ಕತ್ತರಿಸಬೇಕಾಗುತ್ತದೆ. ಆದರೆ ಟ್ರಿಮ್ಮರ್‌ನೊಂದಿಗೆ ನೀಡಲಾಗುವ ಬಾಚಣಿಕೆಗಳು ಈ ಕೆಲಸವನ್ನು ಸುಲಭಗೊಳಿಸುತ್ತವೆ. ಒಮ್ಮೆ ಬಾಚಿ ಹಿಡಿಯಿರಿ. ಟ್ರಿಮ್ಮರ್ ಬಳಸಿರಿ ಅಷ್ಟೆ! ಇದು ನಾಪಿತರ ದೈಹಿಕ ಶ್ರಮವನ್ನಷ್ಟೇ ಅಲ್ಲ, ಮಾನಸಿಕ ಒತ್ತಡವನ್ನೂ ಕಡಿಮೆಗೊಳಿಸುತ್ತದೆ ಎನ್ನುತ್ತಾರೆ ಅವರು.

165 ದೇಶಗಳಲ್ಲೆಗ ವಾಲ್ ಕಂಪೆನಿಯ ಪರಿಕರಗಳನ್ನು ಬಳಸಲಾಗುತ್ತದೆ. ಮುದ್ದುಪ್ರಾಣಿಗಳ ಕೇಶ ವಿನ್ಯಾಸಕ್ಕಾಗಿಯೂ ವಿಶೇಷವಾಗಿ ತಯಾರಿಸಿದ ಟ್ರಿಮ್ಮರ್‌ಗಳು ಲಭ್ಯ ಇವೆ. ಬೆಲೆ 500 ರೂಪಾಯಿಗಳಿಂದ 10, ಸಾವಿರದ ಶ್ರೇಣಿಯವರೆಗೆ ವಿವಿಧ ಬಗೆಯ ಸೌಂದರ್ಯ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಸದ್ಯಕ್ಕೆ ಮುಂಬೈನಲ್ಲಿ ಕೇಂದ್ರ ಕಚೇರಿ ಇರುವ ವಾಲ್ ಬೆಂಗಳೂರು, ಕೋಲ್ಕತ್ತ ಹಾಗೂ ದೆಹಲಿಗಳಲ್ಲಿ ಕಚೇರಿಗಳನ್ನು ತೆರೆಯಲಿದೆ ಎಂದು ವಾಲ್ ಕ್ಲಿಪ್ಪರ್ ಕಾರ್ಪೊರೇಷನ್‌ನ ಪೂರ್ವಾತ್ಯ ಸೇಲ್ಸ್ ನಿರ್ದೇಶಕ ಡಾನ್ ಸೀಲ್ ತಿಳಿಸಿದ್ದಾರೆ.

ಕೇಶ ಸ್ವಾಸ್ಥ್ಯವೇ ಸೌಂದರ್ಯದ ಕೀಲಿಕೈ. ನಿಮ್ಮ ಕೇಶ ಶೈಲಿಯಿಂದ ಅಥವಾ ವಿನ್ಯಾಸದಿಂದಲೇ ವ್ಯಕ್ತಿತ್ವವನ್ನು ಅಳೆಯುವ ಟ್ರೆಂಡ್ ಆರಂಭವಾಗಿದೆ. ಹೇರ್ ಸ್ಟೈಲಿಸ್ಟ್‌ಗಳು ಹೆಚ್ಚಿನ ಮಹತ್ವ ಪಡೆಯುತ್ತಿದೆ.

- ಇಟಿ ಅಗರವಾಲ್,  ಸೋನಂ ಕಪೂರ್, ಎ.ಆರ್. ರೆಹಮಾನ್, ಸಮೀರಾ ರೆಡ್ಡಿ ಕೇಶ ವಿನ್ಯಾಸಕಿ

ನಮ್ಮ ಮುಖದ ಓರೆಕೊರೆಗಳನ್ನು ಮುಚ್ಚಿಡುವ ಅಥವಾ ಚಂದಗೊಳಿಸುವ ಸಾಧ್ಯತೆ ಇರುವುದು ಚಂದದ ಕೇಶ ವಿನ್ಯಾಸದಿಂದ. ನಗುವ ಕಣ್ಣಿನೊಂದಿಗೆ ಕೂದಲುಂಗುರವೂ ಪೈಪೋಟಿಗಿಳಿಯಬೇಕು. ದುಂಡನೆಯ ಮುಖದವರಿಗೆ ಉದ್ದನೆಯ ಕೂದಲಂಚಿಗೆ ಲಾಸ್ಯವಾಡುವ ಗುಂಗುರು ಸೃಷ್ಟಿಸಬೇಕು.

- ಸೇವಿಯೊ ಜಾನ್ ಪೆರೆರಿಯಾ, ಪ್ರಿಯಾಂಕಾ ಚೊಪ್ರಾ, ಸೋನಾಕ್ಷಿ ಸಿನ್ಹಾ, ಶಿಲ್ಪಾ ಶೆಟ್ಟಿ, ನೇಹಾ  ಧುಪಿಯಾ, ಅಜಯ್ ದೇವಗನ್, ವಿಜಯ್ ಮಲ್ಯ, ಎಂ.ಎಸ್ ಧೋನಿ, ಯುವರಾಜ್ ಸಿಂಗ್ ಮುಂತಾದವರ ಕೇಶ ವಿನ್ಯಾಸಕ

ಹೆಚ್ಚಿನ ಮಾಹಿತಿಗೆ www.wahlglobal.com ತಾಣಕ್ಕೆ ಭೇಟಿ ನೀಡಬಹುದು.

ಪ್ರತಿಕ್ರಿಯಿಸಿ (+)