ವಿಂಡೀಸ್‌ಗೆ ಸಮಾಧಾನ ನೀಡಿದ ಜಯ

ಭಾನುವಾರ, ಜೂಲೈ 21, 2019
26 °C

ವಿಂಡೀಸ್‌ಗೆ ಸಮಾಧಾನ ನೀಡಿದ ಜಯ

Published:
Updated:

ಕಿಂಗ್‌ಸ್ಟನ್, ಜಮೈಕ: ಡರೆನ್ ಬ್ರಾವೊ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಮೊತ್ತ (86, 99 ಎಸೆತ, 3 ಬೌಂಡರಿ, 6 ಸಿಕ್ಸರ್) ಪೇರಿಸಿದರಲ್ಲದೆ, ವೆಸ್ಟ್ ಇಂಡೀಸ್ ತಂಡಕ್ಕೆ ಸಮಾಧಾನಕರ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಡೆರೆನ್ ಸಮಿ ನೇತೃತ್ವದ ತಂಡ ಭಾರತದ ವಿರುದ್ಧ ಏಳು ವಿಕೆಟ್‌ಗಳ ಅಧಿಕಾರಯುತ ಜಯ ಪಡೆಯಿತಲ್ಲದೆ, ಸರಣಿ ಸೋಲಿನ ಅಂತರವನ್ನು 2-3ಕ್ಕೆ ತಗ್ಗಿಸಿಕೊಂಡಿತು. ಮಾತ್ರವಲ್ಲ ಟೆಸ್ಟ್ ಸರಣಿಗೆ ಮುನ್ನ ಅಗತ್ಯವಿದ್ದ ಆತ್ಮವಿಶ್ವಾಸ ಗಳಿಸಿಕೊಂಡಿತು.ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ವಿರಾಟ್ ಕೊಹ್ಲಿ (94) ಅವರ ಆಕರ್ಷಕ ಆಟದಿಂದ 251 ರನ್ ಪೇರಿಸಿತ್ತು. ಆದರೆ ಬ್ರಾವೊ ತೋರಿದ ಆಟದ ಮುಂದೆ ಕೊಹ್ಲಿ ಅವರ ಇನಿಂಗ್ಸ್ ಕುಬ್ಜವಾಗಿ ಕಂಡಿತು. ವಿಂಡೀಸ್ ತಂಡ 48.4 ಓವರ್‌ಗಳಲ್ಲಿ 3 ವಿಕೆಟ್‌ಗೆ 255 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು.ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ವಿಂಡೀಸ್ ಬಳಿಕ ಪುಟಿದೆದ್ದು ನಿಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಉಭಯ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪರಸ್ಪರ ಪೈಪೋಟಿ ನಡೆಸಲಿವೆ.ಬ್ರಾವೊ ಅವರಿಗೆ ಉತ್ತಮ ಸಾಥ್ ನೀಡಿದ ರಾಮನರೇಶ್ ಸರವಣ (75, 94 ಎಸೆತ, 5 ಬೌಂ, 1 ಸಿಕ್ಸರ್) ಕೂಡಾ ವಿಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ರಾವೊ ಅವರ ಇನಿಂಗ್ಸ್‌ನಲ್ಲಿ ಆರು ಸಿಕ್ಸರ್‌ಗಳು ಇದ್ದವು. ಇದರಲ್ಲಿ ಐದು ಸಿಕ್ಸರ್‌ಗಳು ಆರ್. ಅಶ್ವಿನ್ ಮತ್ತು ಅಮಿತ್ ಮಿಶ್ರಾ ಅವರ ಎಸೆತಗಳಲ್ಲಿ ಬಂದವು.ವಿಂಡೀಸ್ ತಂಡದ ಗೆಲುವಿಗೆ ಕೊನೆಯ ಎಂಟು ಓವರ್‌ಗಳಲ್ಲಿ 80 ರನ್‌ಗಳು ಬೇಕಿದ್ದವು. ಪಂದ್ಯ ರೋಚಕ ಅಂತ್ಯ ಕಾಣುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಬ್ಯಾಟಿಂಗ್ `ಪವರ್ ಪ್ಲೇ~ ಅವಧಿಯ ಐದು ಓವರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿತು.43ನೇ ಓವರ್‌ನಲ್ಲಿ ಬ್ಯಾಟಿಂಗ್ ಪವರ್ ಪ್ಲೇ ತೆಗೆದುಕೊಂಡು ಸಮಿ ಬಳಗ ಮುಂದಿನ ಐದು ಓವರ್‌ಗಳಲ್ಲಿ 57 ರನ್‌ಗಳನ್ನು ಕಲೆಹಾಕಿತು. ಬ್ರಾವೊ ಅವರು 46ನೇ ಓವರ್‌ನಲ್ಲಿ ಔಟಾದಾಗ ವಿಂಡೀಸ್ ಗೆಲುವಿಗೆ ಇನ್ನೂ 39 ರನ್‌ಗಳು ಬೇಕಿದ್ದವು. ಕೀರನ್ ಪೊಲಾರ್ಡ್ (ಅಜೇಯ 24, 13 ಎಸೆತ, 3 ಬೌಂ) ಮತ್ತು ಮರ್ಲೊನ್ ಸ್ಯಾಮುಯೆಲ್ಸ್ (25 ಎಸೆತಗಳಲ್ಲಿ ಅಜೇಯ 28) ಅವರು ಯಾವುದೇ ಅಪಾಯಕ್ಕೆ ಆಸ್ಪದ ನೀಡದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.ಕೆರಿಬಿಯನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಲೆಂಡ್ಲ್ ಸಿಮಾನ್ಸ್ (6) ಮತ್ತು ಅಡ್ರಿಯಾನ್ ಭರತ್ (17) ಬೇಗನೆ ಮರಳಿದರು. ಬ್ರಾವೊ ಮತ್ತು ಸರವಣ ಅವರು ಮೂರನೇ ವಿಕೆಟ್‌ಗೆ 103 ರನ್‌ಗಳನ್ನು ಸೇರಿಸಿದ ಕಾರಣ ತಂಡದ ಇನಿಂಗ್ಸ್‌ಗೆ ಜೀವ ಬಂತು. ಆದರೆ ಸರವಣ ಸ್ನಾಯು ಸೆಳೆತದ ಕಾರಣ ಪೆವಿಲಿಯನ್‌ಗೆ ಮರಳಿದರು.ಪರಿಸ್ಥಿತಿಗೆ ಹೊಂದಿಕೊಳ್ಳಲು ಅಲ್ಪ ಸಮಯ ತೆಗೆದುಕೊಂಡ ಬ್ರಾವೊ ಬಳಿಕ ಭಾರತದ ಬೌಲರ್‌ಗಳ ಮೇಲೆ ಎರಗಿದರು. ಪ್ರವಾಸಿ ತಂಡದ ಸ್ಪಿನ್ ದಾಳಿಯನ್ನು ಅವರು ಸಮರ್ಥವಾಗಿ ಎದುರಿಸಿ ನಿಂತರು.

ಕರ್ನಾಟಕದ ವೇಗಿ ವಿನಯ್ ಕುಮಾರ್ 46 ರನ್ ನೀಡಿ ಒಂದು ವಿಕೆಟ್ ಪಡೆದರು. 

ಸ್ಕೋರು ವಿವರಭಾರತ: 47.3 ಓವರುಗಳಲ್ಲಿ 251

ಶಿಖರ್ ಧವನ್ ಸಿ ರಾಮನರೇಶ್ ಸರವಣ ಬಿ ಕೆಮರ್ ರಾಚ್ 11ಪಾರ್ಥಿವ್ ಪಟೇಲ್ ಸಿ ಮಾರ್ಟಿನ್ ಬಿ ಆಂಡ್ರೆ ರಸೆಲ್  06

ವಿರಾಟ್ ಕೊಹ್ಲಿ ರನ್‌ಔಟ್ (ಕಾರ್ಲ್‌ಟನ್ ಬಗ್/ಸರವಣ)  94

ಮನೋಜ್ ತಿವಾರಿ ಸಿ ಕಾರ್ಲ್‌ಟನ್ ಬಗ್ ಬಿ ಪೊಲಾರ್ಡ್  22

ರೋಹಿತ್ ಶರ್ಮ ಬಿ ಅಂಥೋಣಿ ಮಾರ್ಟಿನ್  57ಸುರೇಶ್ ರೈನಾ ಸಿ ಅಡ್ರಿಯಾನ್ ಭರತ್ ಬಿ ಪೊಲಾರ್ಡ್  00

ಯೂಸುಫ್ ಪಠಾಣ್ ಸಿ ಕಾರ್ಲ್‌ಟನ್ ಬಗ್ ಬಿ ರಸೆಲ್  30

ಆರ್.ಅಶ್ವಿನ್ ಔಟಾಗದೆ  08

ಅಮಿತ್ ಮಿಶ್ರಾ ಬಿ ಆಂಡ್ರೆ ರಸೆಲ್  00

ಆರ್.ವಿನಯ್ ಕುಮಾರ್ ಸಿ ಕಾರ್ಲ್‌ಟನ್ ಬಗ್ ಬಿ ರಾಚ್  02

ಇಶಾಂತ್ ಶರ್ಮ ಬಿ ಆಂಡ್ರೆ ರಸೆಲ್  00ಇತರೆ: (ಲೆಗ್‌ಬೈ-1, ವೈಡ್-19, ನೋಬಾಲ್-1)  21ವಿಕೆಟ್ ಪತನ:
1-15 (ಪಾರ್ಥಿವ್ ಪಟೇಲ್; 3.4), 2-21 (ಶಿಖರ್ ಧವನ್; 6.6), 3-79 (ಮನೋಜ್ ತಿವಾರಿ; 15.6), 4-189 (ವಿರಾಟ್ ಕೊಹ್ಲಿ; 35.6), 5-190 (ಸುರೇಶ್ ರೈನಾ; 36.5), 6-225 (ರೋಹಿತ್ ಶರ್ಮ; 42.6), 7-245 (ಯೂಸುಫ್ ಪಠಾಣ್; 45.2), 8-246 (ಅಮಿತ್ ಮಿಶ್ರಾ; 45.3), 9-249 (ಆರ್.ವಿನಯ್ ಕುಮಾರ್; 46.6), 10-251 (ಇಶಾಂತ್ ಶರ್ಮ; 47.3).ಬೌಲಿಂಗ್: ಕೆಮರ್ ರಾಚ್ 10-0-52-2 (ವೈಡ್-3), ಡೆರೆನ್ ಸಮಿ 6-0-48-0 (ವೈಡ್-3), ಆಂಡ್ರೆ ರಸೆಲ್ 8.3-0-35-4 (ನೋಬಾಲ್-1, ವೈಡ್-4), ಕೀರನ್ ಪೊಲಾರ್ಡ್ 8-0-39-2 (ವೈಡ್-2), ಅಂಥೋಣಿ ಮಾರ್ಟಿನ್ 10-1-39-1 (ವೈಡ್-1), ಲೆಂಡ್ಲ್ ಸಿಮಾನ್ಸ್ 5-0-37-0 (ವೈಡ್-2). 

ವೆಸ್ಟ್ ಇಂಡೀಸ್: 48.4 ಓವರ್‌ಗಳಲ್ಲಿ 3 ವಿಕೆಟ್‌ಗೆ 255

ಲೆಂಡ್ಲ್ ಸಿಮಾನ್ಸ್ ಸಿ ಮಿಶ್ರಾ ಬಿ ವಿನಯ್ ಕುಮಾರ್  06 

ಅಡ್ರಿಯಾನ್ ಭರತ್ ಎಲ್‌ಬಿಡಬ್ಲ್ಯು ಬಿ ಅಮಿತ್ ಮಿಶ್ರಾ  17

ರಾಮನರೇಶ್ ಸರವಣ (ಗಾಯಗೊಂಡು ನಿವೃತ್ತಿ)  75

ಡರೆನ್ ಬ್ರಾವೊ ಸ್ಟಂಪ್ ಪಟೇಲ್ ಬಿ ಅಮಿತ್ ಮಿಶ್ರಾ  86

ಮರ್ಲೊನ್ ಸ್ಯಾಮುಯೆಲ್ಸ್ ಔಟಾಗದೆ  28ಕೀರನ್ ಪೊಲಾಡ್ ಔಟಾಗದೆ  24

ಇತರೆ: (ಲೆಗ್‌ಬೈ-9, ವೈಡ್-9, ನೋಬಾಲ್- 1)  19ವಿಕೆಟ್ ಪತನ: 1-12 (ಸಿಮಾನ್ಸ್; 4.2), 2-53 (ಭರತ್; 15.2), 2-156 (ಸರವಣ; ಗಾಯಗೊಂಡು ನಿವೃತ್ತಿ) 3-213 (ಬ್ರಾವೊ; 45.1)

ಬೌಲಿಂಗ್: ಆರ್. ವಿನಯ್ ಕುಮಾರ್ 9-2-46-1, ಇಶಾಂತ್ ಶರ್ಮ 9.4-0-49-0 (ವೈಡ್-2), ಅಮಿತ್ ಮಿಶ್ರಾ 10-1-46-2 (ನೋಬಾಲ್-1, ವೈಡ್-1), ಆರ್. ಅಶ್ವಿನ್ 10-1-50-0 (ವೈಡ್-2), ಸುರೇಶ್ ರೈನಾ 6-0-35-0 (ವೈಡ್-2), ಯೂಸುಫ್ ಪಠಾಣ್ 1-0-7-0 (ವೈಡ್-1), ವಿರಾಟ್ ಕೊಹ್ಲಿ 3-0-13-0 (ವೈಡ್-1). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ಏಳು ವಿಕೆಟ್ ಜಯ; ಭಾರತಕ್ಕೆ 3-2 ರಲ್ಲಿ ಸರಣಿ ಗೆಲುವು

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್; ಸರಣಿ ಶ್ರೇಷ್ಠ: ರೋಹಿತ್ ಶರ್ಮ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry