ವಿಂಡೀಸ್ ಆಟಗಾರರಿದ್ದ ಹೋಟೆಲ್‌ಗೆ ಪ್ರವೇಶಿಸಿದ ಯುವತಿಯರ ಬಂಧನ

7

ವಿಂಡೀಸ್ ಆಟಗಾರರಿದ್ದ ಹೋಟೆಲ್‌ಗೆ ಪ್ರವೇಶಿಸಿದ ಯುವತಿಯರ ಬಂಧನ

Published:
Updated:

ಕೊಲಂಬೊ (ಪಿಟಿಐ): ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಆಟಗಾರರಿದ್ದ ಹೋಟೆಲ್‌ನ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ ಮೂವರು ಯುವತಿಯರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.`ಬ್ರಿಟನ್ ಮೂಲದ ಮೂವರು ಯುವತಿಯರನ್ನು ಬಂಧಿಸಲಾಗಿದೆ. ಇವರು ವಿಂಡೀಸ್ ಆಟಗಾರರು ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು~ ಎಂದು ಪೊಲೀಸ್ ವಕ್ತಾರ ಅಜಿತ್ ರೋಹಾನ ತಿಳಿಸಿದ್ದಾರೆ.ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ವಿಂಡೀಸ್ ತಂಡದವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ತಂಡದವರು ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry