ವಿಂಡೀಸ್, ಇಂಗ್ಲೆಂಡ್ ತಂಡಗಳ ಭಾರತ ಪ್ರವಾಸ...

ಬುಧವಾರ, ಜೂಲೈ 17, 2019
27 °C

ವಿಂಡೀಸ್, ಇಂಗ್ಲೆಂಡ್ ತಂಡಗಳ ಭಾರತ ಪ್ರವಾಸ...

Published:
Updated:

ಮುಂಬೈ (ಪಿಟಿಐ): ಈ ವರ್ಷದ ಕೊನೆಯಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಭಾರತ ಪ್ರವಾಸದ ವೇಳೆ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಲಭಿಸಿದೆ. ಬಿಸಿಸಿಐ ಶನಿವಾರ ಪ್ರಕಟಗೊಳಿಸಿದ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಯಾವುದೇ ಪಂದ್ಯ ಲಭಿಸಿಲ್ಲ.ಇಂಗ್ಲೆಂಡ್ ತಂಡ ಭಾರತ ಪ್ರವಾಸದ ವೇಳೆ ಐದು ಏಕದಿನ ಪಂದ್ಯಗಳನ್ನು ಕೋಲ್ಕತ್ತ, ಮುಂಬೈ, ಮೊಹಾಲಿ, ಹೈದರಾಬಾದ್ ಮತ್ತು ದೆಹಲಿಯಲ್ಲಿ ಆಡಲಿವೆ. ಏಕೈಕ ಟ್ವೆಂಟಿ-20 ಪಂದ್ಯ ಈಡನ್‌ನಲ್ಲಿ ನಡೆಯಲಿದೆ.

ಬಳಿಕ ನಡೆಯುವ ವೆಸ್ಟ್ ಇಂಡೀಸ್ ತಂಡದ ಭಾರತದ ಪ್ರವಾಸದ ವೇಳೆ ಒಂದು ಟೆಸ್ಟ್ ಪಂದ್ಯಕ್ಕೆ ಈಡನ್ ಆತಿಥ್ಯ ವಹಿಸಲಿದೆ. ಇತರ ಎರಡು ಟೆಸ್ಟ್‌ಗಳು ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry